ಮುಂಬಯಿ: ಉತ್ತಮ ನಡವಳಿಕೆಯ ಆಧಾರದ ಮೇಲೆ 1993ರ ಮುಂಬಯಿ ಸ್ಫೋಟದ ಆರೋಪಿ ಸಂಜಯ್ ದತ್ತ್ ಅವರನ್ನು ಬಿಡುಗಡೆಗೊಳಿಸಲು ಮುಂದಾಗಿರುವ ಮಹಾರಾಷ್ಟ್ರ ಸರ್ಕಾರದ ಕ್ರಮಕ್ಕೆ ವಿರೋಧಗಳು ವ್ಯಕ್ತವಾಗಿದೆ.
ದತ್ತ್ ಅವರನ್ನು ಮುಂದಿನ ವರ್ಷ ಅಂದರೆ ಅವರ ಜೈಲು ಅವಧಿ ಪೂರ್ಣವಾಗುವುದಕ್ಕೂ ಮೂರುವರೆ ತಿಂಗಳು ಮುನ್ನ ಅವರನ್ನು ಬಿಡುಗಡೆಗೊಳಿಸಲು ಸರ್ಕಾರ ಮುಂದಾಗಿದೆ. ಯೆರವಾಡ ಜೈಲಿನಲ್ಲಿ ಅವರು ಉತ್ತಮ ನಡತೆಯನ್ನು ತೋರಿಸಿದ್ದಾರೆ ಎಂಬ ಕಾರಣಕ್ಕೆ ಅವರಿಗೆ ಜೈಲುಶಿಕ್ಷೆಯಿಂದ 105 ದಿನಗಳ ವಿನಾಯಿತಿ ನೀಡಲಾಗುತ್ತಿದೆ.
ಇದನ್ನು ವಿರೋಧಿಸಿ ಪ್ರಗತಿಪರ ಹೋರಾಟಗಾರರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರೆ ಬರೆದಿದ್ದು, ಹೈ ಪ್ರೊಫೈಲ್ ವ್ಯಕ್ತಿಯನ್ನು ಈ ರೀತಿ ಬಿಡುಗಡೆ ಮಾಡುವುದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಅಲ್ಲದೇ ಸಂಜಯ್ ಬದಲು ಶಿಕ್ಷೆ ಅವಧಿ ಮುಗಿದಿದ್ದರೂ ಯಾರ ಬೆಂಬಲವೂ ಇಲ್ಲದೆ ಜೈಲಿನಲ್ಲಿ ಅಸಾಯಕರಾಗಿ ದಿನ ದೂಡುತ್ತಿರುವವರ ಬಗ್ಗೆ ಸ್ವಲ್ಪ ಕರುಣೆ ತೋರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.