ನವದೆಹಲಿ: ಭಾರತದಲ್ಲಿ ಈ ವರ್ಷ ಅತಿಯಾಗಿ ವೀಕ್ಷಿಸಲ್ಪಟ್ಟ ವಿಷಯಗಳ ಫೇಸ್ಬುಕ್ ಚಾರ್ಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ, ಜಾಗತಿಕ ಮಟ್ಟದಲ್ಲಿ ಟಾಪ್ 10 ರಲ್ಲಿ ಕಾಣಿಸಿಕೊಂಡಿದ್ದಾರೆ.
ಮೋದಿಯ ಬಳಿಕ ಭಾರತದಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ನಂ.2 ವಿಷಯವೆಂದರೆ ಇ-ಕಾಮರ್ಸ್, ಬಳಿಕ ಡಾ.ಎಪಿಜೆ ಅಬ್ದುಲ್ ಕಲಾಂ, ಬಾಹುಬಲಿ ಸಿನಿಮಾ ಮತ್ತು ನೇಪಾಳ ಭೂಕಂಪ.
ಜಾಗತಿಕ ಮಟ್ಟದಲ್ಲಿ ಮೋದಿಯನ್ನು ಹೊರತುಪಡಿಸಿ ಭಾರತದ ಇತರ ಮೂವರು ಟಾಪ್ 10ರಲ್ಲಿ ಕಾಣಿಸಿಕೊಂಡಿದ್ದಾರೆ. ಅವರೆಂದರೆ ಡಾ.ಎಪಿಜೆ ಅಬ್ದುಲ್ ಕಲಾಂ, ನಟ ಸಲ್ಮಾನ್ ಖಾನ್ ಮತ್ತು ನಟಿ ದೀಪಿಕಾ ಪಡುಕೋಣೆ.
ಟ್ವ್ವಿಟರ್ನಲ್ಲೂ ಅತೀಹೆಚ್ಚು ಫಾಲೋವರ್ಗಳನ್ನು ಹೊಂದಿರುವ ಬಾಲಿವುಡ್ಯೇತರ ಸೆಲೆಬ್ರಿಟಿಯಾಗಿ ಮೋದಿ ಹೊರಹೊಮ್ಮಿದ್ದಾರೆ. ಅಷ್ಟೇ ಅಲ್ಲದೇ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ ಮತ್ತು ಜನರು ಅವರ ಸಂದೇಶಗಳನ್ನು ನೇರವಾಗಿ ತಮ್ಮ ಮೊಬೈಲ್ಗಳಲ್ಲಿ ಪಡೆಯಲು ಸಾಧ್ಯವಾಗುವಂತೆ ಮೊಬೈಲ್ ಅಪ್ಲಿಕೇಶನ್ ಹೊಂದಿದ್ದಾರೆ.
ಸ್ವಂತ ಮತ್ತು ಪ್ರಧಾನಿ ಸಚಿವಾಲಯದ ವೆಬ್ಸೈಟ್ ಹೊಂದುವ ಮೂಲಕ ಮೋದಿ ಜನರೊಂದಿಗೆ ಸಂಪರ್ಕ ಬೆಳೆಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.