ಬೆಂಗಳೂರು: ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಆದರ್ಶಗಳನ್ನು ನಂಬುವ ರಾಷ್ಟ್ರಗಳಾದ ಭಾರತ, ಅಮೇರಿಕ, ಜಪಾನ್ಗಳ ಜೊತೆ ಅನನ್ಯ ನಿಕಟ ಸಂಬಂಧ ಹೊಂದುವುದು ಬಹುಮುಖ್ಯ ಎಂದು ಟಿಬೆಟ್ನ ಆಧ್ಯಾತ್ಮ ಗುರು ದಲಾಯಿ ಲಾಮಾ ಹೇಳಿದ್ದಾರೆ.
ಭಾರತ ಅತಿ ಹೆಚ್ಚು ಜನಸಂಖ್ಯೆ ಇರುವ ಪ್ರಜಾಪ್ರಭುತ್ವ ಏಷ್ಯಾದ ಸ್ಥಿರವಾದ ದೇಶ. ಜಪಾನ್ ಕೈಗಾರಿಕೀಕರಣಗೊಂಡ ಪ್ರಜಾಪ್ರಭುತ್ವ ರಾಷ್ಟ್ರ. ಅಮೇರಿಕ ಈ ಮುಕ್ತ ಜಗತ್ತಿನಲ್ಲಿ ಅತ್ಯಂತ ಮುಂದುವರಿದ ರಾಷ್ಟ್ರ ಎಂದು ತಮ್ಮ ಸಂದರ್ಶವೊಂದರಲ್ಲಿ ದಲಾಯಿ ಲಾಮಾ ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಸ್ವಾತಂತ್ರ್ಯ, ಸಮಾನತೆ ಮತ್ತು ಪ್ರಜಾಪ್ರಭುತ್ವವಿರುವ ಸಂಪ್ರದಾಯವಿರುವ ಅಮೇರಿಕ ಭಿನ್ನವಾದ ನಿರಂಕುಶ ದೇಶವಾದರೆ ಮತ್ತೊಂದೆಡೆ ಚೀನಾ ಸರ್ವಾಧಿಕಾರಿ ದೇಶವಾಗಿದೆ ಎಂದು ಹೇಳಿದ್ದಾರೆ.
ಕಳೆದ ಹಲವಾರು ತಲೆಮಾರುಗಳಿಂದಲೂ ಚೀನಾದ 1.3 ಬಿಲಿಯನ್ ಜನರು ಬಳಲುತ್ತಿದ್ದು, ಇದರ ನಿಜಾಂಶವನ್ನು ತಿಳಿಯುವ ಹಕ್ಕು ಮತ್ತು ಸರಿ-ತಪ್ಪುಗಳನ್ನು ಅಳೆಯುವ ಸಾಮರ್ಥ್ಯ ಹೊಂದಿದ್ದಾರೆ. ಯೂರೋಪ್ ಹಾಗೂ ಚೀನಾ ನಡುವಿನ 34ನೇ ಸುತ್ತಿನ ಚರ್ಚೆ ಸಂದರ್ಭ ಟಿಬೆಟ್ನ ಮಾನವ ಹಕ್ಕುಗಳ ವಿಚಾರವನ್ನು ಯೂರೋಪ್ ಎತ್ತಿ ಹಿಡಿದಿತ್ತು ಎಂದು ದಲಾಯಿ ಲಾಮಾ ತಿಳಿಸಿದ್ದಾರೆ.
ಟಿಬೆಟ್ನ ಸಮಸ್ಯೆಗಳನ್ನು ಬಗೆಹರಿಸಲು ಭಾರತ ಸರ್ಕಾರ ಹಲವು ಪ್ರಯತ್ನಗಳನ್ನು ಮಾಡಿದೆ. ಚೀನಾ ಸರ್ಕಾರದ ಜೊತೆಗಿನ ಮಾತುಕತೆ ಸಂದರ್ಭ ಭಾರತ ಸರ್ಕಾರ ಯಾವುದೇ ತಪ್ಪುಗಳನ್ನು ಮಾಡಿಲ್ಲ ಎಂದು ಈ ಸಂದರ್ಭ ಹೇಳಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.