ನವದೆಹಲಿ: ಟಾಟಾ ಸಹೋದರರ ಶೇ.66ರಷ್ಟು ಶೇರುಗಳನ್ನು ನಿಯಂತ್ರಿಸುತ್ತಿರುವ ಟಾಟಾ ಟ್ರಸ್ಟ್ಸ್, ಭಾರತೀಯರಿಗೆ ಉಚಿತ ಆನ್ಲೈನ್ ಶಿಕ್ಷಣ ಒದಗಿಸುತ್ತಿರುವ ಲಾಭರಹಿತ ಸಂಸ್ಥೆ, ಅಮೇರಿಕ ಮೂಲದ ಖಾನ್ ಅಕಾಡೆಮಿ ಜೊತೆ ಪಾಲುದಾರಿಕೆ ಒಪ್ಪಂದಕ್ಕೆ ಮುಂದಾಗಿದೆ.
ಮಾಜಿ ಹೆಡ್ಜ್ ಫಂಡ್ ವಿಶ್ಲೇಷಕ ಸಲ್ಮಾನ್ ಖಾನ್ ಅಮೇರಿಕದ ಆನ್ಲೈನ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ್ದರು. ಟಾಟಾ ಟ್ರಸ್ಟ್ಸ್ ಟಾಟಾ ಗ್ರೂಪ್ನ ಜನಪ್ರಿಯ ಪರೋಪಕಾರಿ ಸಂಸ್ಥೆಯಾಗಿದೆ.
ಖಾನ್ ಅಕಾಡೆಮಿ ಜನರಿಗೆ ಉಚಿತ ಶಿಕ್ಷಣ ಮತ್ತು ಜ್ಞಾನ ಒದಗಿಸುವ ಒಂದು ಪರಿಕಲ್ಪನೆ ಸೃಷ್ಟಿಸಿದೆ. ಇದು ವಿಶೇಷವಾಗಿದೆ. ಇದೊಂದು ಉತ್ತಮ ಅವಕಾಶವೆಂದು ಭಾವಿಸುತ್ತಿದ್ದು, ಇದು ಮುಂದಿನ ಪೀಳಿಗೆಗೆ ಒಂದು ಪರಿವರ್ತನೆಯಾಗಿದೆ ಎಂದು ಟಾಟಾ ಸಂಸ್ಥೆಗಳ ಅಧ್ಯಕ್ಷ ರತನ್ ಟಾಟಾ ಹೇಳಿದ್ದಾರೆ.
ಭಾರತೀಯ ವಿದ್ಯಾರ್ಥಿಗಳು ಈಗಾಗಲೇ ಅಕಾಡೆಮಿಯ ವಿಷಯಗಳನ್ನು ಬಳಸುತ್ತಿದ್ದು, ಭಾರತೀಯರ ಪ್ರಯೋಜನಕನಕ್ಕಾಗಿ ಈ ವಿಷಯಗಳನ್ನು ವಿಶೇಷ ರೀತಿಯಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ರಚಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಭಾರತದ ಶಿಕ್ಷಣ ಸಂಶೋಧನೆ ಮತ್ತು ತರಬೇತಿಗಳ ರಾಷ್ಟ್ರೀಯ ಮಂಡಳಿ ಇದರ ಅನುಗುಣವಾಗಿ ವಿಷಯಗಳನ್ನು ರೂಪಿಸಲಾಗುವುದು ಎಂದು ಖಾನ್ ಅಕಾಡೆಮಿ ಸ್ಥಾಪಕ, ಅಮೇರಿಕ ಮೂಲದ ಸಲ್ಮಾನ್ ಖಾನ್ ತಿಳಿಸಿದ್ದಾರೆ.
ಟಾಟಾ ಟ್ರಸ್ಟ್ಸ್ ಕಳೆದ ಒಂದು ದಶಕದಿಂದ ಅನುದಾನ ನೀಡುವ, ಶಿಕ್ಷಣಕ್ಕಾಗಿ ವಿದೇಶಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವಂತಹ ಕಾರ್ಯಗಳಲ್ಲಿ ತೊಡಗಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.