ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ಥಾನ ಪರಸ್ಪರ ವ್ಯವಹಾರ ನಡೆಸುವಲ್ಲಿ ಪ್ರಬುದ್ಧತೆಯನ್ನು ಪ್ರದರ್ಶಿಸಲು ಇದು ಸೂಕ್ತ ಸಂದರ್ಭ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ಇಸ್ಲಾಮಾಬಾದ್ನಲ್ಲಿ ನಡೆದ ‘ಹಾರ್ಟ್ ಆಫ್ ಏಷ್ಯಾ’ ಸಮಿತ್ನ್ನು ಉದ್ದೇಶಿಸಿ ಮಾತನಾಡಿದ ಅವರು, ಪರಸ್ಪರ ವ್ಯವಹಾರ ನಡೆಸುವಲ್ಲಿ, ಪ್ರಾದೇಶಿಕ ವ್ಯಾಪಾರ ಮತ್ತು ಸಹಕಾರವನ್ನು ಬಲಗೊಳಿಸುವಲ್ಲಿ ಪ್ರಬುದ್ಧತೆ ಮತ್ತು ಆತ್ಮವಿಶ್ವಾಸವನ್ನು ಪ್ರದರ್ಶಿಸಲು ಇದು ಸೂಕ್ತ ಸಮಯ ಎಂದರು.
ಅಲ್ಲದೇ ಅಫ್ಘಾನಿಸ್ತಾನದಿಂದ ಭಾರತಕ್ಕೆ ವಸ್ತುಗಳು ಸರಬರಾಜು ಆಗಲು ಪಾಕಿಸ್ಥಾನ ಅನುವು ಮಾಡಿಕೊಡ ಬೇಕು ಎಂದರು.
‘ನಾಡಿಗಳು ಬಿಗಿಗೊಂಡರೆ ಏಷ್ಯಾದ ಹೃದಯ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಅಫ್ಘಾನಿಸ್ತಾನದ ಬಗೆಗಿನ ಭಾರತದ ದೂರದೃಷ್ಟಿತ್ವ ವ್ಯಾಪಾರ, ಸಾರಿಗೆ, ಇಂಧನದೊಂದಿಗೆ ಮಿಲಿತಗೊಂಡಿದೆ. ಅಫ್ಘಾನ್ ಬುಡಕಟ್ಟು ಅಥವಾ ಜನಾಂಗೀಯ ವೈಷಮ್ಯಗಳಿಂದ ಬೆದರಿಕೆಗೆ ಒಳಪಟ್ಟಿಲ್ಲ ಬದಲಾಗಿ ಭಯೋತ್ಪಾದನೆಯಿಂದ ಬೆದರಿದೆ’ ಎಂದರು.
ಮುಂದಿನ ವರ್ಷ ಭಾರತದಲ್ಲಿ ಹಾಟ್ ಆಫ್ ಏಷ್ಯಾ ಕಾನ್ಫರೆನ್ಸ್ ನಡೆಯಲಿದ್ದು, ಇದಕ್ಕೆ ಆಗಮಿಸುವಂತೆ ಅಫ್ಘಾನ್, ಪಾಕ್, ಚೀನಾ ಸೇರಿದಂತೆ ವಿವಿಧ ಏಷ್ಯಾ ದೇಶಗಳಿಗೆ ಅವರು ಆಹ್ವಾನ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.