ಚೆನ್ನೈ: ಮಹಾಮಳೆಗೆ ತತ್ತರಿಸಿದ ಚೆನ್ನೈನ ಸಹಾಯಕ್ಕೆ ಹಲವಾರು ಮಂದಿ ಸೆಲೆಬ್ರಿಟಿಗಳು ಧಾವಿಸಿದ್ದಾರೆ. ಸಿನಿಮಾ ನಟ ನಟಿಯರು ದೇಣಿಗೆಗಳನ್ನು ನೀಡಿದ್ದಾರೆ. ಕೆಲವರು ಪರಿಹಾರ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.
ಚೆಸ್ ಲೋಕದ ಸಾಮ್ರಾಟ ವಿಶ್ವನಾಥನ್ ಆನಂದ್ ಕೂಡ ತಮ್ಮ ಮನೆಯ ಬಾಗಿಲನ್ನು ನೆರೆ ಸಂತ್ರಸ್ಥರಿಗಾಗಿ ತೆರೆದಿದ್ದಾರೆ. ನೆರೆಯಿಂದ ಅಪಾಯಕ್ಕೆ ಸಿಲುಕಿದ ಸ್ಲಂ ಪ್ರದೇಶದ ಹಲವಾರು ಮಂದಿ ಇವರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಅವರಿಗೆ ಆನಂದ್ ಕುಟುಂಬ ಆಹಾರ, ಬಟ್ಟೆ, ಹೊದಿಕೆ ನೀಡಿ ಉಪಚರಿಸುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆನಂದ್ ಪತ್ನಿ ಅರುಣಾ, ’13-14 ಮಂದಿ ಸಂತ್ರಸ್ಥರು ನಮ್ಮ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಅವರ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಅವರು ಮನೆ ತೊರೆಯಬೇಕಾಯಿತು. ಅವರಿಗೆ ನಾವು ಆಹಾರ, ಬಟ್ಟೆಗಳನ್ನು ನೀಡುತ್ತಿದ್ದೇವೆ. ಇವರಲ್ಲಿ ಹೆಚ್ಚಿನವರು ಮಕ್ಕಳು. ನಾವು ಮಾಡುತ್ತಿರುವುದು ಸಣ್ಣ ಕಾರ್ಯ. ನಮಗಿಂತಲೂ ಅಧಿಕ ಸಹಾಯ ಮಾಡುತ್ತಿರುವವರು ಇದ್ದಾರೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.