ನವದೆಹಲಿ: ದೇಶದಲ್ಲಿ ಕಳೆದ 8 ತಿಂಗಳಿನಿಂದ ಪೊಲೀಸ್ ಕಸ್ಟಡಿಯಲ್ಲಿ ಒಟ್ಟು 111 ಮಂದಿ ಸಾವಿಗೀಡಾಗಿದ್ದಾರೆ, ಪೊಲೀಸರ ವಿರುದ್ಧ 330 ಕಿರುಕುಳ ಪ್ರಕರಣಗಳು ದಾಖಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದೆ.
ಲಿಖಿತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆಯಾಗಿ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜ್ಜು ಅವರು ಈ ಬಗೆಗಿನ ಅಂಕಿಅಂಶಗಳನ್ನು ಲೋಕಸಭೆಯ ಮುಂದಿಟ್ಟರು, ಇದರ ಪ್ರಕಾರ 2015ರ ಎಪ್ರಿಲ್1 ಮತ್ತು ನವೆಂಬರ್ 30ರ ನಡುವೆ ಪೊಲೀಸರ ಮೇಲೆ 24,916 ಪ್ರಕರಣಗಳು ದಾಖಲಾಗಿವೆ.
ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯ ವರದಿಯನ್ನು ಆಧರಿಸಿ ಅಂಕಿಅಂಶಗಳನ್ನು ತಯಾರಿಸಲಾಗಿದೆ. ಇದರ ಪ್ರಕಾರ ದೇಶದಲ್ಲಿ ಪೊಲೀಸರ ವಿರುದ್ಧ 25,357 ಪ್ರಕರಣಗಳು ದಾಖಲಾಗಿದೆ. ಇದರಲ್ಲಿ 111 ಪೊಲೀಸ್ ಕಸ್ಟಡಿ ಡೆತ್ಗಳೂ ಸೇರಿವೆ. 330 ಕಸ್ಡಡಿಯಲ್ಲಿ ಕಿರುಕುಳ ಪ್ರಕರಣಗಳಿವೆ, 24, 916 ಇತರ ಪ್ರಕರಣಗಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.