ಟೋಕಿಯೋ: ಭಾರತದ ಪ್ರಥಮ ಬುಲೆಟ್ ಟ್ರೈನ್ನ್ನು ನಿರ್ಮಿಸಲು ಜಪಾನ್ ಸಜ್ಜಾಗಿದ್ದು, ಈ ಪ್ರಾಜೆಕ್ಟ್ಗಾಗಿ ಅದು ಭಾರತಕ್ಕೆ 8 ಬಿಲಿಯನ್ ಡಾಲರ್ ಸಾಲ ನೀಡಲಿದೆ ಎಂದು ಜಪಾನಿನ ಪ್ರಮುಖ ಬ್ಯುಸಿನೆಸ್ ಪತ್ರಿಕೆ ನಿಕ್ಕೈ ವರದಿ ಮಾಡಿದೆ.
ಭಾರತದ ಮೊದಲ ಬುಲೆಟ್ ಟ್ರೈನ್ ಅಹ್ಮದಬಾದ್ ಮತ್ತು ಮುಂಬಯಿ ನಗರಗಳ ನಡುವೆ ಸಂಪರ್ಕ ಸಾಧಿಸಲಿದೆ. ಶನಿವಾರ ಜಪಾನ್ ಪ್ರಧಾನಿ ಶಿಂಝೋ ಅಬೆಯವರು ಭಾರತಕ್ಕೆ ಭೇಟಿ ನೀಡುವ ಸಂದರ್ಭ ಉಭಯ ದೇಶಗಳು ಈ ಬಗೆಗಿನ ಒಪ್ಪಂದದ ಬಗ್ಗೆ ಜಂಟಿ ಹೇಳಿಕೆ ಹೊರಡಿಸಲಿವೆ ಎಂದು ಪತ್ರಿಕೆ ತಿಳಿಸಿದೆ.
ಆದರೆ ಯಾವ ಮೂಲಗಳಿಂದ ಪತ್ರಿಕೆ ಈ ಮಾಹಿತಿಯನ್ನು ಪಡೆದುಕೊಂಡಿತು ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿಲ್ಲ.
ವಿದೇಶಗಳಿಗೆ ಬುಲೆಟ್ ಟ್ರೈನ್ ಟೆಕ್ನಾಲಜಿಯನ್ನು ರಫ್ತು ಮಾಡುತ್ತಿರುವ ಜಪಾನಿಗೆ ಭಾರತದೊಂದಿಗಿನ ಒಪ್ಪಂದ ಎರಡನೇ ಅತೀ ದೊಡ್ಡ ಯಶಸ್ಸಾಗಿದೆ. ಈ ಹಿಂದೆ 2007ರಲ್ಲಿ ಅದು ತೈವಾನ್ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.
ಬುಲೆಟ್ ಟ್ರೈನ್ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.