ವಡೋದರ: ದೇಶದಲ್ಲಿ ಕ್ರೀಡೆಯನ್ನು ಬೆಳೆಸಬೇಕು, ಉಳಿಸಬೇಕು ಎಂಬ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು, ಹಲವಾರು ಕ್ರೀಡಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಆದರೆ ಇನ್ನೊಂದೆಡೆ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಹಲವಾರು ಕ್ರೀಡಾಳುಗಳಿಗೆ ಜೀವನ ನಿರ್ವಹಣೆ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ರಾಷ್ಟ್ರಮಟ್ಟದ ಶೂಟರ್ 21 ವರ್ಷ ಪುಷ್ಪಾ ಗುಪ್ತಾ ಚಾಂಪಿಯನ್ ಆಗಿದ್ದವಳು, ಆದರೀಗ ಅವಳು ಜೀವನ ಸಾಗಿಸಲು ರಸ್ತೆ ಬದಿಯಲ್ಲಿ ನೂಡಲ್ಸ್ ಮಾರಾಟ ಮಾಡುತ್ತಿದ್ದಾಳೆ. ಗ್ರಾಹಕರನ್ನು ಸೆಳೆಯುದಕ್ಕಾಗಿ ತನಗೆ ದೊರೆತ ಪದಕವನ್ನು ತನ್ನ ಸ್ಟಾಲ್ನ ಮುಂದುಗಡೆ ನೇತು ಹಾಕಿಕೊಂಡಿದ್ದಾಳೆ. ತನ್ನ ಕುಟುಂಬವನ್ನು ಸಾಕಲು ಆಕೆಗೆ ಈ ಕಾಯಕ ಮಾಡುವುದು ಅನಿವಾರ್ಯ.
ಕಾಲೇಜು ಅವಧಿಯಲ್ಲಿ ಶೂಟರ್ ಆಗಿ ಹೊರಹೊಮ್ಮಿದ್ದ ಈಕೆ ನ್ಯಾಷನಲ್ ಕೆಡೆಟ್ ಕಾರ್ಪ್(ಎನ್ಸಿಸಿ) ಸೇರಿದಳು. ಅದರ ಹಣಕಾಸು ನೆರವು ಪಡೆದು ರಾಷ್ಟ್ರಮಟ್ಟದಲ್ಲಿ ಪ್ರದರ್ಶನ ನೀಡಿ ಪದಕಗಳನ್ನು ಗೆದ್ದುಕೊಂಡಿದ್ದಾಳೆ. ದುಬಾರಿ ಕ್ರೀಡೆ ಎನಿಸಿದ ಶೂಟಿಂಗ್ಗೆ ಆ ವೇಳೆ ಎನ್ಸಿಸಿ ವತಿಯಿಂದ ಹಣ ದೊರೆಯುತ್ತಿತ್ತು, ಆದರೆ ಎನ್ಸಿಸಿ ಕೋರ್ಸ್ ಮುಕ್ತಾಯವಾದ ಬಳಿಕ ಆಕೆಗೆ ಶೂಟಿಂಗ್ ತರಬೇತಿಗೆ ಹಣ ಹೊಂದಿಸುವುದು ದುಸ್ತರವಾಗಿದೆ.
ಇದೀಗ ಕುಟುಂಬದ ಸಲಹೆಯಂತೆ ಆಕೆ ಶೂಟಿಂಗ್ ತೊರೆದು ನೂಡಲ್ಸ್ ವ್ಯಾಪಾರ ಮಾಡುತ್ತಿದ್ದಾಳೆ. ಈ ಮೂಲಕ ತನ್ನ ಹಾಗೂ ಕುಟುಂಬದ ನಿರ್ವಹಣೆ ಮಾಡುತ್ತಿದ್ದಾಳೆ.
ಭಾರತದಲ್ಲಿ ಪ್ರತಿಭಾವಂತ ಕ್ರೀಡಾಳುಗಳನ್ನು ಹೇಗೆ ನಿರ್ಲಕ್ಷ್ಯಿಸಲಾಗುತ್ತಿದೆ ಎಂಬುದಕ್ಕೆ ಪುಷ್ಪಾ ಜೀವನವೇ ಒಂದು ನಿದರ್ಶನ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.