ಮೋಹನ್ಲಾಲ್ ಗಂಜ್: ಉತ್ತರಪ್ರದೇಶದ ಮೋಹನ್ಲಾಲ್ ಗಂಜ್ನಲ್ಲಿರುವ ಸಣ್ಣ ಹಳ್ಳಿ ಶೀತಲ್ಖೇರ. ಲಕ್ನೋದಿಂದ ಕೇವಲ 25ಕಿ.ಮೀ ದೂರದಲ್ಲಿರುವ ಈ ಹಳ್ಳಿ ಸ್ವಾತಂತ್ರ್ಯ ಬಂದು ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಮೊನ್ನೆಯವರೆಗೂ ವಿದ್ಯುತನ್ನೇ ಕಂಡಿರಲಿಲ್ಲ. ವಿದ್ಯುತ್ ದೀಪ, ಟಿವಿ, ಪ್ರಿಡ್ಜ್, ಫ್ಯಾನ್ ಇವೆಲ್ಲವೂ ಈ ಹಳ್ಳಿಗರ ಪಾಲಿಗೆ ಗಗನಕುಸುಮವಾಗಿಯೇ ಇತ್ತು. ಆದರೆ ಈಗ ಅದೆಲ್ಲವನ್ನು ಹೊಂದುವ ಭಾಗ್ಯ ಅವರಿಗೆ ದೊರೆತಿದೆ.
ದೀನ್ ದಯಾಳ್ ಉಪಧ್ಯಾಯ ಯೋಜನೆಯಡಿ ಪ್ರಾರಂಭಿಸಲಾದ ಗ್ರಾಮೀಣ ವಿದ್ಯುತೀಕರಣ ಅಭಿಯಾನದಲ್ಲಿ ಬೆಳಕು ಪಡೆದ ನೂರಾರು ಗ್ರಾಮಗಳ ಪೈಕಿ ಶೀತಲ್ಖೇರವೂ ಒಂದು. ಈ ಅಭಿಯಾನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಈ ಹಳ್ಳಿಯ ಬಗ್ಗೆ ಪ್ರಸ್ತಾಪವನ್ನೂ ಮಾಡಿದ್ದರು.
ಈ ಯೋಜನೆಯ ಫಲವಾಗಿ ಶೀತಲ್ಖೇರ ಹಳ್ಳಿಯ 500 ಕುಟುಂಬಗಳ ಬದುಕು ಈಗ ಬದಲಾಗಿದೆ. ಅವರ ಮಕ್ಕಳೀಗ ರಾತ್ರಿ ಹೊತ್ತಲೂ ಓದಬಹುದು. ಟಿವಿ ವೀಕ್ಷಿಸುವ ಅವಕಾಶ ಅವರಿಗೀಗ ಒದಗಿದೆ. ಮೊಬೈಲ್ ಚಾರ್ಜ್ ಮಾಡಲು ನಗರಕ್ಕೆ ಹೋಗಬೇಕೆಂದಿಲ್ಲ. ಒಟ್ಟಿನಲ್ಲಿ ಅವರ ಬದುಕೀಗ ಕತ್ತಲಿನಿಂದ ಬೆಳಕಿನೆಡೆಗೆ ಸಾಗಿದೆ.
ಉತ್ತರಪ್ರದೇಶದಲ್ಲಿ ಒಟ್ಟು 3 ಸಾವಿರ ಹಳ್ಳಿಗಳನ್ನು ಗುರಿಯಾಗಿರಿಸಿ ಗ್ರಾಮೀಣ ವಿದ್ಯುತೀಕರಣ ಅಭಿಯಾನವನ್ನೂ ಆರಂಭಿಸಲಾಗಿತ್ತು. ಆದರೆ ಈ ಅಭಿಯಾನ ಆರಂಭಗೊಂಡ 100 ದಿನಗಳಲ್ಲೇ ಒಟ್ಟು 1,900 ಹಳ್ಳಿಗಳು ವಿದ್ಯುತೀಕರಣಗೊಂಡಿದೆ.
ಸ್ವಾತಂತ್ರ್ಯ ಸಿಕ್ಕು 68 ವರ್ಷ ಕಳೆದರೂ ಇನ್ನೂ ಭಾರತದ ಸಾವಿರಾರು ಹಳ್ಳಿಗಳು ವಿದ್ಯುತ್ ಸಂಪರ್ಕವಿಲ್ಲದೆ ಕಗ್ಗತ್ತಲಲ್ಲಿದೆ. ಈ ಹಳ್ಳಿಗಳೂ ಶೀತಲ್ಖೇರದಂತೆ ಬೆಳಗಬೇಕಿದೆ. ಅಲ್ಲಿನ ಜನರಿಗೂ ಆಧುನಿಕ ಸೌಲಭ್ಯಗಳು ಸಿಗುವಂತಾಗಬೇಕಿದೆ.
ಅಚ್ಛೇ ದಿನ್ ಎಲ್ಲಿದೆ ಎನ್ನುವವರ ಪ್ರಶ್ನೆಗೆ ಇದೂ ಒಂದು ಉತ್ತರ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.