ಮುಂಬಯಿ: 8 ತಿಂಗಳ ಹಿಂದೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದ ಗೋ ಮಾಂಸ ನಿಷೇಧ ಕಾನೂನಿನ ಅನ್ವಯ ಇದುವರೆಗೆ 300 ಮಂದಿಗೆ ಶಿಕ್ಷೆ ನೀಡಲಾಗಿದೆ. ಈ ಬಗೆಗಿನ ಮಾಹಿತಿಯನ್ನು ಸರ್ಕಾರ ಹೈಕೋರ್ಟ್ಗೆ ನೀಡಿದ್ದು, ಇದರಲ್ಲಿ ಗೋ ಮಾಂಸ ಭಕ್ಷಿಸುವವರು ‘ಸಾಂಸ್ಕೃತಿಕ ಅಲ್ಪಸಂಖ್ಯಾತರು’ ಎಂಬುದನ್ನು ತಳ್ಳಿ ಹಾಕಿದೆ.
2015ರ ಮಾರ್ಚ್ನಲ್ಲಿ ಮಹಾರಾಷ್ಟ್ರ ಪ್ರಾಣಿ ಸಂರಕ್ಷಣಾ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ಇದರನ್ವಯ ಒಟ್ಟು 155 ಪ್ರಕರಣಗಳು ದಾಖಲಾಗಿವೆ. 300 ಮಂದಿಗೆ ಶಿಕ್ಷೆಯಾಗಿವೆ. ಎರಡು ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ಎತ್ತು, ಕೋಣಗಳನ್ನು ಅಕ್ರಮ ಸಾಗಾಟ ಮಾಡಿದ ಬಗ್ಗೆಯೇ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಅಪರಾಧಕ್ಕೆ 5 ವರ್ಷ ಸೆರೆವಾಸ ಮತ್ತು 10 ಸಾವಿರ ದಂಡ ವಿಧಿಸಲಾಗುತ್ತದೆ.
ಗೋವು, ಎತ್ತುಗಳ ಮಾಂಸವನ್ನು ಸಾಗಾಟ ಅಥವಾ ಮಾರಾಟ ಮಾಡುವವರಿಗೆ ಒಂದು ವರ್ಷ ಸಜೆ ಮತ್ತು 2 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.
ಗೋ ಮಾಂಸ ಸೇವಿಸುವವರು ಸಾಂಸ್ಕೃತಿಕ ಅಲ್ಪಸಂಖ್ಯಾತರು, ಅವರ ಸಾಂವಿಧಾನಿಕ ಹಕ್ಕನ್ನು ಕಸಿಯಲಾಗಿದೆ. ಗೋ ಮಾಂಸದ ಮೇಲಿನ ನಿಷೇಧವನ್ನು ತೆರವುಗೊಳಿಸಬೇಕು ಎಂದು ಕೋರಿ ಹೈಕೋರ್ಟ್ಗೆ ಅಫಿಡವಿಟ್ ಸಲ್ಲಿಸಲಾಗಿತ್ತು. ಇದಕ್ಕೆ ಉತ್ತರಿಸಿರುವ ಸರ್ಕಾರ, ಗೋಮಾಂಸ ಸೇವಿಸುವುದು ಮೂಲಭೂತ ಹಕ್ಕಲ್ಲ ಎಂದಿದೆ ಅಲ್ಲದೇ ಸಾಂಸ್ಕೃತಿಕ ಅಲ್ಪಸಂಖ್ಯಾತರು ಎಂಬ ಹೇಳಿಕೆಯನ್ನು ತಿರಸ್ಕರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.