ನವದೆಹಲಿ: ದೆಹಲಿಯ ಕೆಲವೊಂದು ಪ್ರದೇಶಗಳಲ್ಲಿ ಇನ್ನು ಮುಂದೆ ‘ಆಲ್ ವುಮೆನ್ ಪಿಸಿಆರ್(ಪೊಲೀಸ್ ಕಂಟ್ರೋಲ್ ರೂಮ್) ವ್ಯಾನ್’ಗಳು ಗಸ್ತು ತಿರುಗಲಿವೆ. ಇದರ ಚಾಲಕಿಯರನ್ನಾಗಿ ಪೊಲೀಸ್ ಇಲಾಖೆ ಎಂಟು ಮಹಿಳಾ ಕಾನ್ಸ್ಸ್ಟೇಬಲ್ಗಳನ್ನು ನಿಯೋಜಿಸಿದೆ.
ಈ ಯೋಜನೆ ಮುಂದಿನ ತಿಂಗಳು ಜಾರಿಗೆ ಬರಲಿದ್ದು, ಸದ್ಯಕ್ಕೆ ಇಂಡಿಯಾ ಗೇಟ್, ದಕ್ಷಿಣ ದೆಹಲಿಯ ವಸಂತ್ ಕುಂಜ್ ಪ್ರದೇಶಗಳಲ್ಲಿ ಮಹಿಳಾ ಪೊಲೀಸ್ ವ್ಯಾನ್ ಗಸ್ತು ತಿರುಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬಳಿಕ ದೆಹಲಿ ವಿಶ್ವವಿದ್ಯಾನಿಲಯ ಆವರಣ ಸೇರಿದಂತೆ ಇತರ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ಮಹಿಳಾ ಪಿಸಿಆರ್ ವ್ಯಾನ್ಗಳು ಗಸ್ತು ತಿರುಗುವಂತೆ ಮಾಡಲಾಗುತ್ತದೆ ಎಂದಿದ್ದಾರೆ.
ದೌರ್ಜನ್ಯ, ಗೇಲಿ ಮಾಡುವುದು, ಹಿಂದೆ ತಿರುಗುವುದು, ಹೀಗೆ ಇನ್ನಿತರ ರೀತಿಯ ಮಹಿಳಾ ದೌರ್ಜನ್ಯವನ್ನು ತಡೆಗಟ್ಟುವ ಸಲುವಾಗಿ ಮಹಿಳಾ ಪೊಲೀಸ್ ಕಂಟ್ರೋಲ್ ರೂಮ್ ವ್ಯಾನ್ಗಳನ್ನು ದೆಹಲಿಯಲ್ಲಿ ಗಸ್ತು ತಿರಿಗಿಸಲಾಗುತ್ತಿದೆ. ಅಷ್ಟೇ ಅಲ್ಲದೇ ದೂರವಾಣಿ ಮೂಲಕ ಬರುವ ದೂರುಗಳ ಬಗ್ಗೆಯೂ ಕಾರ್ಯಪ್ರವೃತ್ತರಾಗಬೇಕಿದೆ.
ಈ ಯುನಿಟ್ಗೆ ವಿವಿಧ ಪರೀಕ್ಷೆಗಳ ಮೂಲಕ ಮಹಿಳಾ ಪೊಲೀಸರನ್ನು ಆಯ್ಕೆ ಮಾಡಲಾಗುತ್ತಿದೆ. ಪ್ರಸ್ತುತ 240 ಮಹಿಳೆಯರು ಆಯ್ಕೆಗೊಂಡಿದ್ದಾರೆ. ಇವರನ್ನು ಉಸ್ತುವಾರಿಗಳನ್ನಾಗಿ ಅಥವಾ ಗನ್ ಪರ್ಸನ್ಗಳನ್ನಾಗಿ ನೇಮಕ ಮಾಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.