ನವದೆಹಲಿ: ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಬಗೆಗಿನ ರಹಸ್ಯ ಮಾಹಿತಿಗಳನ್ನು ಅವರ ಜನ್ಮದಿನವಾದ ಜ.23ರಂದು ಬಹಿರಂಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅ.14ರಂದು ನೇತಾಜಿ ಕುಟುಂಬದೊಂದಿಗಿನ ಚರ್ಚೆ ವೇಳೆ ಘೋಷಿಸಿದ್ದರು. ಇದೀಗ ನೇತಾಜಿಗೆ ಸಂಬಂಧಿಸಿದ 33 ಕಡತಗಳನ್ನು ಪ್ರಧಾನಿ ಸಚಿವಾಲಯವು ನ್ಯಾಷನಲ್ ಆರ್ಕೈವ್ಸ್ಗೆ ಒಪ್ಪಿಸಿದೆ. ನೇತಾಜಿಗೆ ಸಂಬಂಧಿಸಿದ ಕಡತಗಳ ಡಿಜಿಟಲೀಕರಣ, ಪರಿಷ್ಕರಣೆ ಮತ್ತು ಸಂರಕ್ಷಣೆಯ ಅಂಗವಾಗಿ ಆರ್ಕೈವ್ಸ್ಗೆ ಒಪ್ಪಿಸಿರುವುದಾಗಿ ಸಚಿವಾಲಯ ತಿಳಿಸಿದೆ. ಇದು ನೇತಾಜಿಯವರ ರಹಸ್ಯ ಮಾಹಿತಿಗಳ ಬಹಿರಂಗ ಪ್ರಕ್ರಿಯೆಯಲ್ಲಿ ಸರ್ಕಾರ ಬದ್ಧವಾಗಿದ್ದು, 33 ಕಡತಗಳನ್ನು ನ್ಯಾಷನಲ್ ಆರ್ಕೈವ್ಸ್ಗೆ ನೀಡಿರುವುದು ಹೊಸ ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರಹಸ್ಯ ಮಾಹಿತಿಗಳನ್ನು ಸಂಗ್ರಹಿಸಿ ಬಹಿರಂಗಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ.
ರಷ್ಯಾ ಸೇರಿದಂತೆ ವಿದೇಶಿ ರಾಷ್ಟ್ರಗಳಲ್ಲಿರುವ ನೇತಾಜಿ ಸಂಬಂಧಿತ ಕಡತಗಳಳನ್ನು ಬಹಿರಂಗಗೊಳಿಸಲು ಅಲ್ಲಿಯ ನಾಯಕರಿಗೆ ಮನವಿ ಮಾಡಲಾಗಿದ್ದು, ಜ. 23 ರಂದು ಮೊದಲ ಹಂತದಲ್ಲಿ ಬಿಡುಗಡೆ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.