ಚೆನ್ನೈ: ಪ್ರವಾಹಕ್ಕೆ ತತ್ತರಿಸಿ ಚೆನ್ನೈ ಜನತೆ ಪರದಾಡುತ್ತಿದ್ದರೂ ಅಲ್ಲಿನ ಮುಖ್ಯಮಂತ್ರಿ ಜಯಲಲಿತಾ ಮಾತ್ರ ಇತರ ರಾಜ್ಯಗಳ ನೆರವು ಪಡೆಯಲು ಹಿಂದೇಟು ಹಾಕಿದ್ದಾರೆ.
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ತಮಿಳುನಾಡಿಗೆ ನೆರವು ಘೋಷಿಸಿದೆ, ಆದರೆ ಜಯಾ ಮಾತ್ರ ಸದ್ಯಕ್ಕೆ ನಮಗೆ ಯಾವ ರಾಜ್ಯಗಳ ನೆರವೂ ಬೇಡ, ನಮಗೀಗ ಕೇಂದ್ರದ ನೆರವಿದೆ. ಅಗತ್ಯಬಿದ್ದರೆ ನಾವಾಗಿಯೇ ಸಂಪರ್ಕಿಸಿ ನೆರೆವು ಪಡೆದುಕೊಳ್ಳುತ್ತೇವೆ ಎಂದಿದ್ದಾರೆ.
ಕೇಂದ್ರ ತಮಿಳುನಾಡಿಗೆ ೧೯೪೮ ಕೋಟಿ ನೆರವು ಘೋಷಿಸಿದೆ. ಸಿನಿಮಾ ನಟ, ನಟಿಯರೂ ನೆರವು ನೀಡಲು ಮುಂದಾಗಿದ್ದಾರೆ. ಬಿಹಾರ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಸಹಾಯಕ್ಕೆ ಮುಂದಾಗಿವೆ. ಆದರೆ ಜಯ ಅವರು ನೆರವು ಬೇಡ ಎಂದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.