ಪ್ಯಾರೀಸ್: ಗುರುವಾರ ರಾತ್ರಿ ಫ್ರೆಂಚ್ ರಾಜಧಾನಿಯನ್ನು ತಲುಪಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಿಗ್ಗೆ ವಿದ್ಯುಕ್ತ ಸ್ವಾಗತವನ್ನು ಪಡೆದು ಅಲ್ಲಿನ ಗಣ್ಯರೊಂದಿಗೆ ದ್ವಿಪಕ್ಷೀಯ ಮಾತುಕತೆಯಲ್ಲಿ ಮಗ್ನವಾಗಿದ್ದಾರೆ.
ಇಂದಿನ ವಿಶೇಷತೆಯೆಂದರೆ ಮೋದಿಯವರು ಫ್ರೆಂಚ್ ಅಧ್ಯಕ್ಷ ಫ್ರಾನ್ಸಿಸ್ಕೋ ಹ್ಯಾಲೆಂಡ್ ಜೊತೆ ಬೋಟ್ ರೈಡಿಂಗ್ ಮಾಡುತ್ತಾ ಮಾತುಕತೆ ನಡೆಸಲಿದ್ದಾರೆ. ಇದನ್ನು ‘ನಾವ್ ಪೆ ಚರ್ಚಾ(ದೋಣಿಯಲ್ಲಿ ಚರ್ಚೆ)’ ಎಂದು ಕರೆಯಲಾಗಿದೆ. ಈ ಹಿಂದೆ ಮೋದಿ ಅಮೆರಿಕ ಅಧ್ಯಕ್ಷ ಸೇರಿದಂತೆ ಇತರ ಗಣ್ಯರೊಂದಿಗೆ ‘ಚಾಯ್ ಪೇ ಚರ್ಚಾ’ ನಡೆಸಿದ್ದರು.
ತ್ರಿರಾಷ್ಟ್ರಗಳಿಗೆ ಭೇಟಿ ನೀಡಲಿರುವ ಮೋದಿ ಒಂದರ ಹಿಂದೆ ಒಂದರಂತೆ ರೌಂಡ್ ಟೇಬಲ್ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಫ್ರೆಂಚ್ ಸಿಇಓಗಳೊಂದಿಗೆ ಮೂಲಭೂತ ಸೌಕರ್ಯ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಿದ್ದಾರೆ. ರಕ್ಷಣಾ ತಂತ್ರಜ್ಞಾನದ ಬಗ್ಗೆ ಮಾತುಕತೆ ನಡೆಸಲಿದ್ದಾರೆ.
ಯುನೆಸ್ಕೋದಲ್ಲಿ ಭಾಷಣ ಮಾಡಲಿದ್ದಾರೆ, ಬಳಿಕ ಫ್ರೆಂಚ್ ನ್ಯಾಷನಲ್ ಅಸೆಂಬ್ಲಿಯಲ್ಲಿ ಔತನಕೂಟದಲ್ಲಿ ಭಾಗವಹಿಸಲಿದ್ದಾರೆ. ಹಾಲೆಂಡ್ ಅವರೊಂದಿಗೆ ದ್ವೀಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಎ.12ರಂದು ಜರ್ಮನಿಗೆ ತೆರಳಲಿರುವ ಅವರು ಅಲ್ಲಿಂದ ಕೆನಡಾಗೆ ಪ್ರಯಾಣ ಬೆಳಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.