ನವದೆಹಲಿ: ವಿವಿಧ ಭಾರತೀಯ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ ಏಳು ಉಪಗ್ರಹಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಡಾವಣೆಗೊಳಿಸುವ ಸಾಧ್ಯತೆ ಇದೆ.
ಭಾರತೀಯ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ ಅಭಿವೃದ್ಧಿ ಹಂತದಲ್ಲಿರುವ ವಿವಿಧ ಉಪಗ್ರಹಗಳನ್ನು ಇಸ್ರೋ ಉಡಾವಣೆಗೊಳಿಸಲಿದೆ ಎಂದು ಸಿಬ್ಬಂದಿ ಖಾತೆ ರಾಜ್ಯ ಸಚಿವ, ಸಾರ್ವಜನಿಕ ಮತ್ತು ಪಿಂಚಣಿ, ಅಣ್ವಸ್ತ್ರ ಹಾಗೂ ಬಾಹ್ಯಾಕಾಶ ಇಲಾಖೆ, ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಪುಣೆ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ವಿನ್ಯಾಸಗೊಳಿಸಿರುವ SWAYAM, ಪಿಇಎಸ್ ವಿಶ್ವವಿದ್ಯಾಲಯ, ಬೆಂಗಳೂರು ಇದರ ವಿದ್ಯಾಥಿಗಳು ವಿನ್ಯಾಸಗೊಳಿಸಿರುವ PISAT, ಇಂಡಿಯನ್ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ಮುಂಬಯಿ ಇದರ PRATHAM, ಸತ್ಯಭಾಮಾ ವಿಶ್ವವಿದ್ಯಾಲಯ, ಚೆನ್ನೈ ಇದರ SATYABHAMASAT, ನೂರುಲ್ ಇಸ್ಲಾಂ ವಿಶ್ವವಿದ್ಯಾಲಯ, ಕುಮಾರಕೋಯಿಲ್ ಇದರ NIUSAT, ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕರ್ನಾಟಕ, (ಎಂಐಟಿ) ಇದರ PARIKSHIT ಐಐಟಿ, ಚೆನ್ನೈ ಇದರ PARIKSHIT ಈ ಏಳು ಉಪಗ್ರಹಗಳಾಗಿವೆ.
ಈ ಹಿಂದೆ 2009ರಲ್ಲಿ ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯ ANUSAT ನಿರ್ಮಿಸಿದ್ದರೆ 2010ರಲ್ಲಿ ವಿಶ್ವವಿದ್ಯಾಲಯಗಳ ಒಕ್ಕೂಟ SಖಿUಆSಂಖಿ ಉಪಗ್ರಹ ನಿರ್ಮಿಸಿದ್ದವು. ಅ.12, 2011ರಲ್ಲಿ ಎಸ್ಆರ್ಎಂ ವಿಶ್ವವಿದ್ಯಾಲಯ SRMSAT ಉಪಗ್ರಹ ಹಾಗೂ ಐಐಟಿ ಕಾನ್ಪುರ JUGNU ಉಪಗ್ರಹಗಳನ್ನು ವಿನ್ಯಾಸಗೊಳಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.