ಶ್ರೀನಗರ: ದೇಶದಲ್ಲಿ ಸಹಿಷ್ಣುತೆ ಇದೆಯೇ, ಇಲ್ಲವೇ ಎಂಬ ಬಗ್ಗೆ ಚರ್ಚೆ ನಡೆಸುವುದರಲ್ಲೇ ಜನರು ಬ್ಯೂಸಿಯಾಗಿರುವ ಈ ಸಂದರ್ಭದಲ್ಲಿ ಕಾಶ್ಮೀರಿ ಪಂಡಿತನೋರ್ವ ವಿವಿಧ ಸಮುದಾಯಗಳ ನಡುವೆ ಭಾವೈಕ್ಯತೆ ಮೂಡಿಸಲು ವಿನೂತನ ಪ್ರಯೋಗವನ್ನು ಮಾಡಿದ್ದಾರೆ.
ವೃತ್ತಿಯಲ್ಲಿ ವೈದ್ಯರಾಗಿರುವ ಸಂದೀಪ್ ನೂತನವಾಗಿ ರಚಿತವಾಗಿರುವ ಜಮ್ಮು ಕಾಶ್ಮೀರ ರಿಕಾನ್ಸಿಲೇಶನ್ ಫ್ರಾಂಟ್ನ ಸದಸ್ಯ. ನಾನು ಕಾಶ್ಮೀರಿ ಪಂಡಿತ್. ನಾನು ನಿಮ್ಮನ್ನು ನಂಬುತ್ತೇನೆ ಮತ್ತು ಗೌರವಿಸುತ್ತೇನೆ. ತುಂಬಾನೇ ಚಳಿ ಇದೆ. ನನ್ನನ್ನು ತಬ್ಬಿ ಎಂದು ಸಂದೇಶವಿರುವ ಬೋರ್ಡ್ ಹಾಕಿ ಶ್ರೀನಗರದ ಪ್ರೆಸ್ ಕೊಲೋನಿಯಲ್ಲಿ ಕಣ್ಣಿಗೆ ಪಟ್ಟಿ ಕಟ್ಟಿ ನಿಂತ ಇವರು ವಿನೂತನ ಅಭಿಯಾನವನ್ನು ಆರಂಭಿಸಿದ್ದಾರೆ.
ವಿವಿಧ ಸಮುದಾಯಗಳ ನಡುವೆ ಅದರಲ್ಲೂ ಮುಸ್ಲಿಂ ಮತ್ತು ಕಾಶ್ಮೀರಿ ಪಂಡಿತರ ನಡುವೆ ಸಾಮರಸ್ಯವನ್ನು ಮೂಡಿಸಬೇಕು, ವಿಶ್ವ ಭಾವೈಕ್ಯತೆಯನ್ನು ಸಾರಬೇಕು ಎಂಬ ಒಳ್ಳೆಯ ಉದ್ದೇಶದಿಂದ ಇವರು ಈ ಅಭಿಯಾನ ಆರಂಭಿಸಿದ್ದಾರೆ.
ನ.13ರ ದಾಳಿಯ ನಂತರ ಪ್ಯಾರಿಸ್ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಇದೇ ರೀತಿ ಬೋರ್ಡ್ ಹಿಡಿದು ನಾನು ಮುಸ್ಲಿಂ ಉಗ್ರವಾದಿ ಅಲ್ಲ, ನಂಬಿಕೆ ಇದ್ದವರು ನನ್ನನ್ನು ತಬ್ಬಿಕೊಳ್ಳಿ ಎಂದು ಕಣ್ಣಿಗೆ ಪಟ್ಟಿ ಕಟ್ಟಿ ನಿಂತಿದ್ದರು. ಹಲವಾರು ಮಂದಿ ಇವರನ್ನು ತಬ್ಬಿಕೊಂಡಿದ್ದರು. ಇದರಿಂದ ಸ್ಫೂರ್ತಿ ಪಡೆದು ಸಂದೀಪ್ ಈ ಅಭಿಯಾನ ಆರಂಭಿಸಿದ್ದಾರೆ.
ಸಂದೀಪ್ಗೆ ಹಲವಾರು ಮಂದಿ ಸಾಥ್ ನೀಡಿ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲಾ ಧರ್ಮಿಯರೂ ಇದರಲ್ಲಿ ಪಾಲ್ಗೊಂಡು
ನಾನು ಮುಸ್ಲಿಂ/ಸಿಖ್/ಹಿಂದೂ ಹೀಗೆ ಹಲವಾರು ಬೋರ್ಡ್ಗಳನ್ನು ಹಾಕಿ ತಬ್ಬುವಂತೆ ಕೇಳಿಕೊಳ್ಳುತ್ತಿದ್ದಾರೆ.
ನಾವೆಲ್ಲರೂ ಮನುಷ್ಯರು, ದೇವರು ನಮ್ಮಲ್ಲಿ ಎಂದಿಗೂ ಬೇಧಭಾವ ಮಾಡಿಲ್ಲ ಹಾಗಿರುವಾಗ ನಮ್ಮಲ್ಲೇಕೆ ಒಡಕು ಇರಬೇಕು? ಅಸಹಿಷ್ಣುತೆ ಎನ್ನುವುದು ಇರಲೇ ಬಾರದು. ಈ ಸಂದೇಶವನ್ನು ಜಗತ್ತಿನಾದ್ಯಂತ ಪಸರಿಸಲು ನಾವು ಬಯಸುತ್ತೇವೆ ಎನ್ನುತ್ತಾರೆ ಸಂದೀಪ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.