ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ವಿವಿಧ ಸಂದರ್ಭಗಳಲ್ಲಿ ಭೇಟಿಯಾಗಿ ಮಾತುಕತೆ ನಡೆಸಿರುವ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರು, ಮೋದಿಯೊಬ್ಬ ಪ್ರಾಮಾಣಿಕ ರಾಜಕಾರಣಿ ಮತ್ತು ಭಾರತದ ಬಗ್ಗೆ ಅವರಿಗೆ ಸ್ಪಷ್ಟ ದೃಷ್ಟಿಕೋನವಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ವೈಟ್ಹೌಸ್ ಪ್ರೆಸ್ ಸೆಕ್ರೆಟರಿ ಜೋಶ್ ಅರ್ನೆಸ್ಟ್, ‘ ಅಧ್ಯಕ್ಷ ಒಬಾಮ ಅವರು ಮೋದಿಯನ್ನು ಒಬ್ಬ ಪ್ರಾಮಾಣಿಕ ಮತ್ತು ನೇರ, ವಾಸ್ತವದ ಬಗ್ಗೆ ಕಮಾಂಡ್ ಹೊಂದಿರುವ, ತನ್ನ ದೇಶದ ವಿಷಯಗಳ ಬಗ್ಗೆ ಮತ್ತು ನಮ್ಮ ಸಂಬಂಧಗಳ ಬಗ್ಗೆ ಸ್ಪಷ್ಟ ಅರಿವಿರುವ ವ್ಯಕ್ತಿಯಾಗಿ ಕಂಡುಕೊಂಡಿದ್ದಾರೆ’ ಎಂದಿದ್ದಾರೆ.
ಮೋದಿಯವರಿಗೆ ತಮ್ಮ ದೇಶವನ್ನು ಎಲ್ಲಿಗೆ ಕೊಂಡೊಯ್ಯಬೇಕೆಂಬ ಸ್ಪಷ್ಟ ಗುರಿಯಿದೆ. ಇದು ಅವರನ್ನೊಬ್ಬ ಪ್ರಭಾವಶಾಲಿ ರಾಜಕಾರಣಿ ಮಾತ್ರವಲ್ಲ ಪ್ರಭಾವಶಾಲಿ ಪ್ರಧಾನಿಯನ್ನಾಗಿಯೂ ರೂಪಿಸಿದೆ. ಒಬಾಮ ಮೋದಿ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ ಮತ್ತು ಅವರ ಕೌಶಲ್ಯವನ್ನು, ರಾಜಕಾರಣಿಯಾಗಿ ಅವರ ಸಾಮರ್ಥ್ಯವನ್ನು ಶ್ಲಾಘಿಸುತ್ತಾರೆ. ಮೋದಿ ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವದ ಉನ್ನತ ಸ್ಥಾನದಲ್ಲಿ ಕುಳಿತು ಅವರು ಅತ್ಯಂತ ಕಠಿಣ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಅರ್ನೆಸ್ಟ್ ಹೇಳಿದ್ದಾರೆ.
ಸೋಮವಾರ ಒಬಾಮ ಅವರು ಮೋದಿಯನ್ನು ಪ್ಯಾರೀಸ್ನಲ್ಲಿ ಭೇಟಿಯಾಗಿದ್ದರು. ಇದು ಕಳೆದ ಆರು ತಿಂಗಳಿನಲ್ಲಿ ಉಭಯ ನಾಯಕರ ಆರನೇ ಭೇಟಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.