ಇಸ್ಲಾಮಾಬಾದ್: ಪೇಶಾವರ ಶಾಲೆಯ ಮೇಲೆ ದಾಳಿ ನಡೆಸಿದ ನಾಲ್ವರು ಉಗ್ರರನ್ನು ಪಾಕಿಸ್ಥಾನ ಬುಧವಾರ ಗಲ್ಲಿಗೇರಿಸಿದೆ. ಈ ದಾಳಿಯ ಆರೋಪಿಗಳಿಗೆ ನೀಡುತ್ತಿರುವ ಮೊದಲ ಮರಣದಂಡನೆ ಇದಾಗಿದೆ.
ಕೋಹಟ್ ಜೈಲಿನಲ್ಲಿ ಇಂದು ಬೆಳಿಗ್ಗೆ ಉಗ್ರರಾದ ಮೌಲ್ವಿ ಅಬ್ಡಸ್ ಸಲಾಂ, ಹಝ್ರತ್ ಅಲಿ, ಮುಜೀಬರ್ ರೆಹಮಾನ್, ಸಬೀಲ್ ಅಲಿಯಾಸ್ ಯಹ್ಯ ಎಂಬಾತನನ್ನು ಗಲ್ಲಿಗೇರಿಸಲಾಯಿತು ಎಂದು ಪೇಶಾವರ ಭದ್ರತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಉಗ್ರರಿಗೆ ಮಂಗಳವಾರ ಸಂಜೆ ಕುಟುಂಬ ಸದಸ್ಯರನ್ನು ಭೇಟಿಯಾಗುವ ಅವಕಾಶವನ್ನು ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಕಳೆದ ಡಿಸೆಂಬರ್ 16ರಂದು ಈ ಉಗ್ರರು ಪೇಶಾವರ ಶಾಲೆಯ ಮೇಲೆ ದಾಳಿ ನಡೆಸಿದ ಶಸ್ತ್ರಸಜ್ಜಿತ ತಾಲಿಬಾನ್ ಉಗ್ರರು ಮಕ್ಕಳು ಸೇರಿದಂತೆ ಒಟ್ಟು ೧೫೦ ಮಂದಿಯ ಹತ್ಯೆ ಮಾಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.