ವಾಷಿಂಗ್ಟನ್: ಮದರಸದಲ್ಲಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಬಹಿರಂಗವಾಗಿ ಆರೋಪಿಸಿರುವ ಕೇರಳದ ಪತ್ರಕರ್ತೆ ವಿಪಿ ರಜೀನಾ ಅವರ ಬೆಂಬಲಕ್ಕೆ ಭಾರತೀಯ-ಅಮೆರಿಕನ್ ಸಮುದಾಯ ಮುಂದಾಗಿದೆ.
ಮಲಯಾಳಂ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುವ ರಜೀನಾ ಅವರು ಬಾಲ್ಯದಲ್ಲಿ ಮದರಸದಲ್ಲಿ ತಾನು ಅನುಭವಿಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ಫೇಸ್ಬುಕ್ನಲ್ಲಿ ಬರೆದಿದ್ದರು, ತಾನಿದ್ದ ಮದರಸದ ಉಸ್ತಾದ್ ಮಕ್ಕಳನ್ನು ಲೈಂಗಿಕವಾಗಿ ಬಳಸುತ್ತಿದ್ದ ಎಂದು ಆರೋಪಿಸಿದ್ದರು.
ಈ ಆರೋಪದ ಬಳಿಕ ರಜೀನಾ ಅವರಿಗೆ ಹಲವಾರು ಬೆದರಿಕೆಗಳು ಬಂದಿವೆ, ಹಲವಾರು ಮಂದಿ ಅವರ ಉದ್ದೇಶವನ್ನು ಪ್ರಶ್ನಿಸಿದ್ದಾರೆ. ಆದರೆ ಇದೀಗ ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್ ಅವರ ಬೆಂಬಲಕ್ಕೆ ಧಾವಿಸಿದ್ದು, ಮದರಸದಲ್ಲಿ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಹೇಳಿದೆ.
ಮದರಸಗಳಲ್ಲಿ ಮಕ್ಕಳ ಲೈಂಗಿಕ ಶೋಷಣೆ ನಡೆಯತ್ತಿರುವ ಬಗ್ಗೆ ಮುಸ್ಲಿಂ ಸಮುದಾಯ ಆಂತರಿಕ ಆದರೆ ಸ್ವತಂತ್ರ ಮತ್ತು ಪಾರದರ್ಶಕ ವಿಶ್ಲೇಷಣೆಯನ್ನು ನಡೆಸುವಂತೆ ಕೌನ್ಸಿಲ್ ಮುಖಂಡ ಉಮರ್ ಮಲ್ಲಿಕ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.