ಭೋಪಾಲ್: ಯಶಸ್ಸಿನ ಉತ್ತುಂಗದಲ್ಲಿರುವ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರ ಬೇಡಿಕೆಗಳೂ ಉತ್ತುಂಗಕ್ಕೇರಿವೆ. ಮಧ್ಯಪ್ರದೇಶದ ಭೋಪಾಲ್ನಲ್ಲಿ ಆಯೋಜಿಸಲಾಗಿದ್ದ ಕ್ರೀಡಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲು ಇವರಿಟ್ಟ ಬೇಡಿಕೆ ನೋಡಿ ಕ್ರೀಡಾ ಸಚಿವರೇ ಸುಸ್ತಾಗಿದ್ದಾರೆ.
ಸಮಾರಂಭಕ್ಕೆ ಆಗಮಿಸುವಂತೆ ಸಾನಿಯಾ ಅವರನ್ನು ಕೋರಿದಾಗ ಒಪ್ಪಿಕೊಂಡ ಅವರು ಈ ಬಗ್ಗೆ ತನ್ನ ಮ್ಯಾನೇಜರ್ ಜೊತೆ ಮುಂದಿನ ಮಾತುಕತೆ ನಡೆಸುವಂತೆ ತಿಳಿಸಿದರು. ಆದರೆ ಸಾನಿಯಾ ಮ್ಯಾನೇಜರ್ ಇಟ್ಟ ಬೇಡಿಕೆಗಳ ಪಟ್ಟಿ ನೋಡಿ ಅಧಿಕಾರಿಗಳು ತಬ್ಬಿಬ್ಬುಗೊಂಡಿದ್ದಾರೆ.
ಸಾನಿಯಾ ಅವರಿಗೆ 5 ಲಕ್ಷ ರೂಪಾಯಿ ಧನ ನೀಡಬೇಕು, ಭೋಪಾಲ್ಗೆ ಬಂದಿಳಿಯಲು ಚಾರ್ಟರ್ಡ್ ಪ್ಲೇನ್ ವ್ಯವಸ್ಥೆ ಮಾಡಬೇಕು ಮತ್ತು ಅವರ ಮೇಕ್ ಅಪ್ ಆರ್ಟಿಸ್ಟ್ಗಳಿಗೆ 75 ಸಾವಿರ ರೂಪಾಯಿ ನೀಡಬೇಕು, ಅಲ್ಲದೇ ಅವರ 5 ಮಂದಿ ಸಿಬ್ಬಂದಿಗಳಿಗೆ ಪ್ರತ್ಯೇಕ ಧನ ನೀಡಬೇಕು ಎಂಬ ಬೇಡಿಕೆಯನ್ನು ಇಡಲಾಗಿದೆ.
ಮಧ್ಯಪ್ರದೇಶದ ಕ್ರೀಡಾಸಚಿವ ಯಶೋಧರ ರಾಜೆ ಸಿಂಧೀಯಾರವರು ಸಾನಿಯಾ ಬೇಡಿಕೆಗಳನ್ನು ಒಪ್ಪದೇ ಇದ್ದ ಕಾರಣ ಬಳಿಕ ಬ್ಯಾಡ್ಮಿಂಟನ್ ಕೋಚ್ ಪಿ.ಗೋಪಿಚಂದ್ ಅವರನ್ನು ಕಾರ್ಯಕ್ರಮದ ಮುಖ್ಯತಿಥಿಗಳನ್ನಾಗಿ ಕರೆಸಲಾಯಿತು. ಡಿ.1ರಂದು ಈ ಕಾರ್ಯಕ್ರಮ ನೆರವೇರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.