ನವದೆಹಲಿ: ರಾಜ್ಯಸಭೆಯಲ್ಲಿ ಮಂಗಳವಾರವೂ ವಿರೋಧ ಪಕ್ಷ ಪ್ರಾಯೋಜಿತ ಅಸಹಿಷ್ಣುತೆಯ ಚರ್ಚೆ ಮುಂದುವರೆದಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಅಜೆಂಡಾವನ್ನು ಮರೆ ಮಾಚಿಸುವ ಯಾವುದೇ ಹೇಳಿಕೆಯನ್ನು ನೀಡದಂತೆ ಬಿಜೆಪಿ ಸಂಸದರಿಗೆ ಪಕ್ಷದ ಮುಖಂಡರು ತಾಕೀತು ಮಾಡಿದ್ದಾರೆ.
ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ, ‘ವಿಷಯವನ್ನು ಅರ್ಥೈಸಿಕೊಂಡು ಸಭ್ಯ ರೀತಿಯಲ್ಲಿ ಹೇಳಿಕೆ ನೀಡುವಂತೆ ಸಂಸದರಿಗೆ ಸೂಚಿಸಲಾಗಿದೆ, ವಿವಾದಗಳಿಂದ ದೂರವಿರುವುದು ಅತ್ಯಗತ್ಯ. ಪ್ರಧಾನಿ ಅಭಿವೃದ್ಧಿ ಅಜೆಂಡಾವನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವುದು ಹಲವರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದು ತಪ್ಪು ನಿರ್ಧಾರ ಬಿಜೆಪಿ ವಿರೋಧಿಗಳಿಗೆ ಅನುಕೂಲ ಮಾಡಿಕೊಡುವ ಅಪಾಯವಿದೆ, ಪ್ರಚೋದನಾಕಾರಿ ಹೇಳಿಕೆ ನೀಡುವುದನ್ನು ತಡೆಯಬೇಕಿದೆ’ ಎಂದಿದ್ದಾರೆ.
ಅಸಹಿಷ್ಣುತೆಯ ಹೆಸರು ಹೇಳಿ ದೇಶವನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ, ಬಿಜೆಪಿ ಸರ್ಕಾರದ ಅಧೀನದಲ್ಲಿ ಕೋಮು ಗಲಭೆಗಳು ತಗ್ಗಿವೆ, ಸಾಮಾಜಿಕ ಸಾಮರಸ್ಯ ಎಲ್ಲ ಕಡೆಯೂ ಇದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.