ಸೌದಿ: ಇಸ್ಲಾಂ ಧರ್ಮದ ವಿರುದ್ಧವಾಗಿ ಬರೆದ ಪ್ಯಾಲೇಸ್ತೇನ್ ಬರಹಗಾರ ಅಶ್ರಫ್ ಫಯಾದ್ ಅವರಿಗೆ ಸೌದಿ ಅರೇಬಿಯಾದಲ್ಲಿ ಮರಣ ದಂಡನೆ ಶಿಕ್ಷೆಯನ್ನು ವಿಧಿಸಲಾಗಿದೆ.
35 ವರ್ಷದ ಫಯಾದ್ ಬ್ರಿಟಿಷ್-ಸೌದಿ ಆರ್ಟ್ ಸಂಸ್ಥೆಯ ಪ್ರಮುಖ ಸದಸ್ಯ. ಇಸ್ಲಾಂ ವಿರುದ್ಧ ಬರೆದ ಕಾರಣ ಈ ಹಿಂದೆಯೂ ಇವರಿಗೆ 4 ವರ್ಷ ಜೈಲು ಶಿಕ್ಷೆ ಮತ್ತು 800 ಛಡಿಯೇಟುಗಳ ಶಿಕ್ಷೆಯನ್ನು ನೀಡಲಾಗಿದೆ.
ಪ್ಯಾಲೇಸ್ತೇನ್ ನಿರಾಶ್ರಿತರಾಗಿರುವ ಫಯಾದ್ ಸೌದಿಯಲ್ಲಿ ನೆಲೆಸಿದ್ದರು. ಬಂಧನದ ವೇಳೆ ಇವರ ಐಡಿ ಕಾರ್ಡ್ನ್ನು ಪೊಲೀಸರು ವಶಪಡಿಸಿಕೊಂಡ ಕಾರಣ ಇವರಿಗೆ ತಮ್ಮ ಪರ ವಾದಿಸಲು ವಕೀಲರನ್ನು ನೇಮಿಸಲೂ ಸಾಧ್ಯವಾಗಿಲ್ಲ.
ಕಳೆದ ವಾರ ಕೋರ್ಟ್ ಇವರಿಗೆ ಮರಣದಂಡನೆಯನ್ನು ವಿಧಿಸಿದೆ. ಮೇಲ್ಮನವಿಗೆ 30 ದಿನಗಳ ಕಾಲವಕಾಶ ನೀಡಿದೆ. ಆದರೆ ವಕೀಲರು ಇಲ್ಲದ ಕಾರಣ ಫಯಾದ್ ನೇಣಿಗೆ ಕೊರಳೊಡ್ಡುವುದು ಅನಿವಾರ್ಯವಾಗಿದೆ.
ಭಾರತದಲ್ಲಿ ಧರ್ಮ ದೇವರುಗಳಿಗೆ ನಿತ್ಯ ಅವಮಾನ ಮಾಡುವವರನ್ನು ಬುದ್ಧಿ ಜೀವಿಗಳೆಂದು ಕರೆಯಲಾಗುತ್ತದೆ. ಆದರೂ ಆ ಬುದ್ಧಿಜೀವಿಗಳು ಭಾರತ ಅಸಹಿಷ್ಣುತೆಯ ದೇಶ ಎಂದು ಜಾಗತಿಕ ಮಟ್ಟದಲ್ಲಿ ದೇಶದ ಮಾನ ಕಳೆಯುತ್ತಿದ್ದಾರೆ. ಅಂತಹವರು ಸೌದಿಯ ಈ ಕ್ರಮದ ಬಗ್ಗೆ ಏನು ಹೇಳುತ್ತಾರೆ? ನಿಜವಾದ ಸಹಿಷ್ಣುತೆ ಎಲ್ಲಿದೆ ಎಂಬುದು ಈಗಲಾದರೂ ಅವರಿಗೆ ಅರಿವಿಗೆ ಬರಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.