ಪ್ಯಾರಿಸ್: ಪ್ಯಾರಿಸ್ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ 21ನೇ ಕಾನ್ಫರೆನ್ಸ್ ಆಫ್ ಪಾರ್ಟಿಸ್ (ಕಾಪ್ 21)ನಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ವಿಶ್ವದ ಎಲ್ಲಾ ರಾಷ್ಟ್ರಗಳ 150ಕ್ಕೂ ಅಧಿಕ ನಾಯಕರು ಪಾಲ್ಗೊಳ್ಳಲಿದ್ದಾರೆ.
ಈ ಶೃಂಗಸಭೆಯಲ್ಲಿ ಜಾಗತಿಕ ತಾಪಮಾನದ ದರಕ್ಕೆ 2 ಡಿಗ್ರಿ ಸೆಲ್ಶಿಯಸ್ ಮಿತಿ ಹೇರುವ ಉದ್ದೇಶದಿಂದ ೧೨ ದಿನಗಳ ಕಾಲ ಹವಾಮಾನ ಬದಲಾವಣೆ ಚರ್ಚೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪರ ಶೃಗಸಭೆ ಉದ್ಘಾಟಿಸಲಿದ್ದು, ವಿಶ್ವ ನಾಯಕರು, ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಈ ಸಂದರ್ಭ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಫ್ರಾಕೊಯಿಸ್ ಹೊಲ್ಯಾಂಡ್ ಜೊತೆ ಜಂಟಿಯಾಗಿ ಇಂಟರ್ನ್ಯಾಶನಲ್ ಸೋಲಾರ್ ಅಲಯನ್ಸ್ ಬಿಡುಗಡೆಗೊಳಿಸಲಿದ್ದಾರೆ. ಹವಾಮಾ ಬದಲಾವಣೆ ಕುರಿತು ಭಾರತದ ನಿಲುವನ್ನು ಮೋದಿ ಪ್ರಕಟಿಸಲಿದ್ದು, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ೧೬.೭ ಕೋಟಿ ರಪಾಯಿ ನೆರವು ನೀಡಲಿದೆ.
ಭಾರತವು ಪರಿಸರ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಮಹತ್ವದ ವಿಷಯಗಳ ಕುರಿತು ಚರ್ಚಿಸಲಿದೆ. ಪರಿಸರ, ಪ್ರಕೃತಿ ಮತ್ತು ಬದ್ಧತೆಯಲ್ಲಿ ಭಾರತ ಸಾಮರಸ್ಯ ಪ್ರದರ್ಶಿಸಿ ಹವಾಮಾನ ಬದಲಾವಣೆ ತಡೆಗಟ್ಟವ ವಿಚಾರಕ್ಕೆ ಹೆಚ್ಚಿನ ಒತ್ತು ನೀಡಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಅಮೇರಿಕ ಅಧ್ಯಕ್ಷ ಬರಾಕ್ ಒಬಾಮಾ ಆತಿಥ್ಯದ ’ಮಿಷನ್ ಇನ್ನೋವೇಷನ್’ನಲ್ಲಿ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.