ನವದೆಹಲಿ: ಉತ್ತರ ಪ್ರದೇಶದ 18 ಗ್ರಾಮಗಳ ಮಂಡಳಿಗಳು ಸುತ್ತಮುತ್ತಿನ ಪ್ರದೇಶದಲ್ಲಿ ಕೋಕಾ ಕೋಲಾ ತಯಾರಿಕಾ ಸ್ಥಾವರ ನೀರನ್ನು ಬಳಸುತ್ತಿದ್ದು, ಭೂಮಿಯ ತಳಮಟ್ಟದ ನೀರಿನಪ್ರಮಾಣದಲ್ಲಿ ಕೊರತೆ ಕಂಡು ಬಂದಿದೆ. ಆದ್ದರಿಂದ ಈ ಸ್ಥಾವರವನ್ನು ನಿಷೇಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ ಎಂದು ಪರಿಸರ ಅಭಿಯಾನ ತಂಡ ತಿಳಿಸಿದೆ. ವಾರಣಾಸಿ ಜಿಲ್ಲೆಯ ಮೆಹ್ದಿಗಂಜ್ ಪ್ರದೇಶದಲ್ಲಿ 1999ರಲ್ಲಿ ಈ ಸ್ಥಾವರ ಆರಂಭಗೊಂಡಿದ್ದು, ಆ ಬಳಿಕ ಅಲ್ಲಿನ ಜನರು ನೀರಿನ ಕೊರತೆಯಿಂದಾಗಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಕೋಕಾ ಕೋಲಾ ಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ವತಃ ನೀರಿನ ಬಳಕೆಯ ಜವಾಬ್ದಾರಿ ಹೊತ್ತಿದೆಯಾದರೂ, ಭಾರತದಲ್ಲಿ ಇದರ ಗಣಿ ಪ್ರದೇಶದಲ್ಲಿ ಅಂತರ್ಜಲ ಬಳಕೆಯಿಂದಾಗಿ ನೀರಿನ ಮಟ್ಟ ಇಳಿದಿದೆ. ಇದರಿಂದಾಗಿ ಇಲ್ಲಿನ ಜನರು, ರೈತರು, ಜಾನುವಾರುಗಳು ನೀರಿನ ಕೊರತೆ ಎದುರಿಸುವ ಪರಿಸ್ಥಿತಿ ಉಂಟಾಗಿದೆ ಎನ್ನಲಾಗಿದೆ.
ಮೆಹದಿಗಂಜ್ ಪ್ರದೇಶವು ಕೃಷಿ ಪ್ರದೇಶವಾಗಿದ್ದು, ಇಲ್ಲಿನ ಜನಸಮುದಾಯವು ಕುಡಿಯಲು, ನೀರಾವರಿ, ಜಾನುವಾರುಗಳಿಗೆ ಅಂತರ್ಜಲವನ್ನೇ ಅವಲಂಬಿಸಿವೆ. ಕೋಕಾ ಕೋಲಾ ಕಂಪೆನಿಯು ಇದೇ ಅಂತರ್ಜಲವನ್ನು ಬಳಸುತ್ತಿದ್ದು, ಸ್ಥಳೀಯ ಸಮುದಾಯದೊಂದಿಗೆ ನೇರ ಸ್ಪರ್ಧೆಗೆ ಇಳಿದಿದೆ ಎಂದು ಪರಿಸರವಾದಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.