ನವದೆಹಲಿ: ಇ- ಕಾಮರ್ಸ್ ಸಂಸ್ಥೆಗಳ ದೃಷ್ಟಿಕೋನ ಮತ್ತು ವಿವಿಧ ಸ್ತರಗಳ ವ್ಯಾಪಾರ ರಚನೆಯನ್ನು ಗಮನದಲ್ಲಿರಿಸಿ ಸರ್ಕಾರ ತೆರಿಗೆ ಮತ್ತಿತರ ವಿಷಯಗಳ ಕುರಿತು ಸದ್ಯದಲ್ಲೇ ಸ್ಪಷ್ಟ ಮಾಹಿತಿ ನೀಡಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈಗಾಗಲೇ ಮಧ್ಯವರ್ತಿಗಳ ಜೊತೆ ಸಭೆ ನಡೆಸಲಾಗಿದ್ದು, ರಾಜ್ಯ ಸರ್ಕಾರಗಳು ಒಳಹರಿವು(inputs) ಮಾಹಿತಿ ನೀಡಿದ್ದಾರೆ. ಮಾರುಕಟ್ಟೆಯ ಅಗತ್ಯ ಮತ್ತು ಪೋರ್ಟಲ್ಗಳ ಬಳಕೆಯ ಪೂರ್ಣ ಮಾಹಿತಿ ನೀಡಲಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೇ ಸಚಿವಾಲಯವು ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಯನ್ನು (ಎಫ್ಡಿಐ) ಅವಲಂಬಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎಲ್ಲಾ ರಾಜ್ಯ ಸರ್ಕಾರಗಳು ಬೃಹತ್ ಕೈಗಾರಿಕೆಗಳ ಮೇಲೆ ವ್ಯಾಟ್ ಅಥವಾ ಸೇವಾ ತೆರಿಗೆ ವಿಧಿಸಿವೆ ಎಂದು ಹೇಳಿದ್ದಾರೆ. ಚೀನಾದ ಜೊತೆಗೆ ಭಾರತದ ಮಾರುಕಟ್ಟೆಯೂ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಜಾಗತಿಕ ಸಂಸ್ಥೆಗಳು ಭಾರತದ ಕಡೆ ವಾಲಿದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.