ಭಾದೇರ್ವಾಹ್: ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯ ಸುಮಾರು 12 ಹಳ್ಳಿಗಳ ನಿವಾಸಿಗಳು ಸ್ವಾತಂತ್ರ್ಯ ಬಳಿಕದ 68 ವರ್ಷಗಳು ಸಂದರು ಇಂದಿಗೂ ವಿದ್ಯುತ್ ಇಲ್ಲದೇ ವಾಸಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಕೇಂದ್ರದಿಂದ ನಿಧಿ ಹಂಚಿಕೆಯಾಗಿದ್ದು, ಈವರೆಗೆ ಯಾವುದೇ ಪ್ರಗತಿ ಕಂಡಿಲ್ಲ.
ಕೇಂದ್ರ ಸರ್ಕಾರವು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ಅನುಸಾರ ಎಲ್ಲಾ ರಾಜ್ಯಗಳಿಗೆ ಸಾಕಷ್ಟು ನಿಧಿ ಹಂಚಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಇದುವರೆಗೂ ಈ ಹಳ್ಳಿಗಳಿಗೆ ವಿದ್ಯುತ್ ಒದಗಿಸಲು ವಿಫಲಗೊಂಡಿದೆ ಎಂದು ಭಾದೇವಾಹ್ ನಿವಾಸಿಗಳು ದೂರಿದ್ದಾರೆ.
ದ್ರಾಮನ್, ಬಾಗ್ದಾನ್, ತಾಂಟಾ, ವಾಣಿಪುರಾ, ಕುಶಾರ್ ಥಾವಾ, ಮಾಗ್ರೆ ಮೊಹಲ್ಲಾ ಮುಂತಾದ ಹಳ್ಳಿಗಳು ವಿದ್ಯುತ್ ಸಂಪರ್ಕ ಹೊಂದಿಲ್ಲ. ಕುಶಾರ್ ಥಾವಾ ಪ್ರದೇಶದಲ್ಲಿ ೨೦೧೨ರಲ್ಲಿ ಕೇಂದ್ರ ಸರ್ಕಾರದ ಪ್ರಾಯಜಕತ್ವದಲ್ಲಿ ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸಲಾಗಿದ್ದು, ಈವರೆಗೆ ಅದರ ಕಾರ್ಯ ಪೂರ್ಣಗೊಂಡಿಲ್ಲ.
ಇಂದಿನ 21ನೇ ಶತಮಾನದಲ್ಲಿ ಕೂಡ ಇಲ್ಲಿನ ವಿದ್ಯಾರ್ಥಿಗಳು ತಮ್ಮ ಪರೀಕ್ಷೆ ತಯಾರಿಗಾಗಿ ಕ್ಯಂಡಲ್ (ಮೇಣಬತ್ತಿ) ಬಳಸುವ ಕಠಿಣ ಪರಿಸ್ಥಿತಿ ಎದುರಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.