ನ್ಯೂಯಾರ್ಕ್: ಅಮೇರಿಕದ ಬಾಹ್ಯಾಕಾಶ ಸಂಸ್ಥೆಯು ಮುಂದಿನ ಮೂರು ವರ್ಷಗಳಲ್ಲಿ ತನ್ನ ಹಬ್ಬಲ್ ದೂರದರ್ಶಕವನ್ನು ಜೇಮ್ಸ್ ವೆಬ್ ಬಾಹ್ಯಾಕಾಶ ದೂದರ್ಶಕವನ್ನಾಗಿ ಬದಲಿಸಲಿದೆ. ಈ ದೂರದರ್ಶಕವು ೧೮ ಪ್ರತ್ಯೇಕ ದೂರದರ್ಶಕ ಕನ್ನಡಿಗಳನ್ನು ಹೊಂದಲಿದ್ದು, 21.3 ಅಡಿಯ ಪ್ರಮುಖ ಕನ್ನಡಿಯಾಗಿ ಏಕಕಾಲದಲ್ಲಿ ಕಾರ್ಯ ನಿರ್ವಹಿಸಲಿದೆ.
ಮುಂದಿನ ಒಂದು ವರ್ಷದೊಳಗೆ ಇದರ ಸ್ಥಾಪನೆಯಾಗಲಿದ್ದು, 2018ರ ಒಳಗೆ ಇದರ ನಿರ್ಮಾಣ ಪೂರ್ಣಗೊಂಡು ಕಾರ್ಯರೂಪಕ್ಕೆ ಬರಲಿದೆ. ಇದು ಮುಂದಿನ ದಶಕದ ಪ್ರಮುಖ ಖಗೋಳ ವೀಕ್ಷಣಾಲಯವಾಗಲಿದೆ ಎಂದು ನಾಸಾದ ಕೇಂದ್ರ ಕಾರ್ಯಾಲಯದ ವಿಜ್ಞಾನ ಅಭಿಯಾನ ನಿರ್ದೇಶನಾಲಯದ ಸಹಾಯಕ ವ್ಯವಸ್ಥಾಪಕ ಜಾನ್ ಗ್ರೆನ್ಸ್ಫೀಲ್ಡ್ ಹೇಳಿದ್ದಾರೆ.
ಈ ಕನ್ನಡಿಯು ಅತ್ಯಂತ ಹಗುರವಾಗಿದ್ದು, ಬೆರಿಲಿಯಮ್ನಿಂದ ತಯಾರಿಸಲಾಗಿದೆ. ಪ್ರತ್ಯೇಕ ಕನ್ನಡಿಗಳು ಚಿನ್ನದ ಲೇಪನ ಹೊಂದಿದ್ದು, ಇನ್ಫ್ರಾರೆಡ್ ಬೆಳಕನ್ನು ತೋರ್ಪಡಿಸುವ ಸಾಮರ್ಥ್ಯ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.