ನವದೆಹಲಿ: ಸ್ನ್ಯಾಪ್ಡೀಲ್ ರಾಯಭಾರಿ ಹಾಗೂ ಹಿಂದಿ ಚಿತ್ರ ನಟ ಅಮೀರ್ ಖಾನ್ ಅವರು ಅಸಹಿಷ್ಣುತೆ ಕುರಿತು ನೀಡಿರುವ ಹೇಳಿಕೆಯಿಂದಾಗಿ ಸ್ನ್ಯಾಪ್ಡೀಲ್ ಆ್ಯಪ್ ತನ್ನ ರೇಟಿಂಗ್ನಲ್ಲಿ ಇಳಿಕೆ ಕಂಡಿದೆ.
ಪ್ರಶಸ್ತಿ ಸಮಾರಂಭವೊಂದರಲ್ಲಿ ಮಾತನಾಡಿದ್ದ ಅಮೀರ್ ಖಾನ್, ತನ್ನ ಪತ್ನಿ ಕಿರಣ್ ದೇಶದಲ್ಲಿ ಅಸಹಿಷ್ಣುತೆ ವ್ಯಾಪಕವಾಗಿ ಬೆಳೆಯುತ್ತಿರುವ ಬಗೆಗೆ ಆತಂಕ ವ್ಯಕ್ತಪಡಿಸಿದ್ದಾಳೆ. ಸುತ್ತಲಿನ ವಾತಾವರಣದಿಂದ ಮಗುವಿನ ಭವಿಷ್ಯದ ಕುರಿತು ಚಿಂತೆಯಾಗಿದೆ. ಹಾಗಾಗಿ ಕುಟುಂಬ ಸಮೇತ ಭಾರತದಿಂದ ಹೊರಹೋಗುವುದೇ ಒಳ್ಳೆಯದು ಎಂದು ಕಿರಣ್ ಅಭಿಪ್ರಾಯಪಟ್ಟಿದ್ದಾಳೆ. ಅಸಹಿಷ್ಣುತೆ ಹೆಚ್ಚುತ್ತಿರುವುದು ಒಂದು ರೀತಿಯಲ್ಲಿ ಎಚ್ಚರಿಕೆಯ ಗಂಟೆಯಾಗಿದೆ ಎಂದು ಹೇಳಿದ್ದರು.
ಅಮೀರ್ ಖಾನ್ ಅವರ ಈ ಹೇಳಿಕೆಯಿಂದ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಸಾಮಾಜಿಕ ಜಾಣತಾಣಗಳಲ್ಲಿ ಹೆಚ್ಚು ಚರ್ಚೆಗೊಳಪಟ್ಟಿದೆ.
ಆನ್ಲೈನ್ ಮಾರುಕಟ್ಟೆ ಸ್ನ್ಯಾಪ್ಡೀಲ್ ಮೇಲೂ ಇದರ ಪ್ರಭಾವ ಹೆಚ್ಚಾಗಿದ್ದು, ಸುಮಾರು 10 ಲಕ್ಷಕ್ಕೂ ಅಧಿಕ ಸ್ನ್ಯಾಪ್ಡೀಲ್ ಬಳಕೆದಾರರು ರೇಟಿಂಗ್ ಇಳಿಕೆ ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಅನೇಕ ಬಳಕೆದಾರರು ನಿರ್ದಿಷ್ಟ 1 ಸ್ಟಾರ್ ರೇಟಿಂಗ್ ನೀಡಲೆಂದೇ ಸ್ನ್ಯಾಪ್ಡೀಲ್ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿರುವುದಾಗಿ ಹೇಳಿದ್ದಾರೆ. 70 ಸಾವಿರಕ್ಕೂ ಅಧಿಕ ಮಂದಿ ಕೇವಲ 1 ಸ್ಟಾರ್ ರೇಟಿಂಗ್ ನೀಡಿದ್ದು, ಸಾವಿರಾರು ಮಂದಿ ಈ ಅಪ್ಲಿಕೇಶನ್ನ್ನು ತಮ್ಮ ಮೊಬೈಲ್ ಉಪಕರಣಗಳಿಂದ ತೆಗೆದು ಹಾಕಿದ್ದಾರೆ.
ಇನ್ನೊಂದೆಡೆ ಟ್ವಿಟರ್ನಲ್ಲೂ ಅಮೀರ್ ಖಾನ್ ಹೇಳಿಕೆ ವಿರುದ್ಧ ವ್ಯಾಪಕ ಖಂಡನೆ ನಡೆಯುತ್ತಿದ್ದು, ಸ್ನ್ಯಾಪ್ಡೀಲ್ ಅಧಿಕೃತ ರಾಯಭಾರ ತೆಗೆದು ಹಾಕುವ ತನಕ ಆನ್ಲೈನ್ ಖರೀದಿ ಮಾಡುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.