ಸಿಂಗಾಪುರ: ತಮ್ಮ ಎರಡು ದಿನಗಳ ಸಿಂಗಾಪುರ ಪ್ರವಾಸದ ಎರಡನೇ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತ-ಸಿಂಗಾಪುರ ನಡುವಿನ ಆರ್ಥಿಕತೆ ಬಲಗೊಳಿಸುವ ಹಲವು ಯೋಜನೆಗಳ ಬಗ್ಗೆ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.
ಐತಿಹಾಸಿಕ ಸಂಬಂಧಗಳು ಮತ್ತು ಸಾಂಸ್ಕೃತಿಕ ಸಾಮೀಪ್ಯತೆ ನಮ್ಮ ಸ್ವತ್ತುಗಳಾಗಿವೆ. ಸಿಂಗಾಪುರವು ಜಾಗತಿಕವಾಗಿ 10ನೇ ಅತಿದೊಡ್ಡ ವ್ಯಾಪಾರ ಪಾಲುದಾರ ಆಗಿದ್ದು, ಅಸಿಯಾನ್ (ASEAN)ನ ಎರಡನೇ ಪಾಲುದಾರ. ಸಿಂಗಾಪುರದಲ್ಲಿ ಭಾರತದ ಎಫ್ಡಿಐ ಹೆಚ್ಚಾಗಿದ್ದು, ಆಂಧ್ರಪ್ರದೇಶದ ಅಮರಾವತಿಯ ಮೂಲಭೂತ ನಿರ್ಮಾಣದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.
ಪ್ರತಿಯೊಬ್ಬರ ಖಾತೆಗೆ ಹಣ ತಲುಪುವಂತೆ 190 ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು, ಇದರ ಪ್ರಯೋಜನವನ್ನು ಬಡವರು ನೇರವಾಗಿ ಪಡೆಯುವಂತೆ ಮಾಡುವುದೇ ಇದರ ಗುರಿಯಾಗಿದೆ. ಸಂಸತ್ತಿನಲ್ಲಿ ಜಿಎಸ್ಟಿ ಬಿಲ್ನ್ನು ಪರಿಚಯಿಸಲಾಗಿದ್ದು, 2016ರಲ್ಲಿ ಜಾರಿಗೊಳಿಸುವ ಭರವಸೆ ಇದೆ ಎಂದು ತಿಳಿಸಿದ್ದಾರೆ.
ಎಲ್ಲಾ ಆರ್ಥಿಕ ರಾಷ್ಟ್ರಗಳ ಪೈಕಿ ಭಾರತವು ಎಫ್ಡಿಐ ಹೂಡಿಕೆಗೆ ಅತ್ಯಂತ ಮುಕ್ತವಾಗಿದೆ. ಮೇಕ್ ಇನ್ ಇಂಡಿಯಾ ಉಪಕ್ರಮದ ಮೂಲಕ ಎಲ್ಲಾ ರಂಗಗಳಲ್ಲೂ ಜಾಗತಿಕ ಉತ್ಪಾದನೆಯ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.