ಪ್ಯಾರಿಸ್: ಶೌರ್ಯ ಎಂಬುದು ಯಾವುದೇ ಆಕಾರ, ರೂಪವನ್ನು ಹೊಂದಬಲ್ಲದು. ನಾವು ಸಾಮಾನ್ಯವಾಗಿ ಸೈನಿಕರು, ಪೊಲೀಸರು, ವೈದ್ಯರು, ಅಗ್ನಿಶಾಮಕ ದಳದವರ ಶೌರ್ಯ, ಜಾಣ್ಮೆಯ ಕುರಿತು ಕೇಳಿದ್ದೇವೆ. ಆದರೆ ಶೌರ್ಯ, ಸಾಮರ್ಥ್ಯ ತೋರುವುದು ಕೇವಲ ಮಾನವರು ಮಾತ್ರವಲ್ಲ ಎಂಬುದನ್ನು ಶ್ವಾನವೊಂದು ತೋರಿಸಿಕೊಟ್ಟಿದೆ.
ನವೆಂಬರ್ 18ರಂದು ಪ್ಯಾರಿಸ್ನಲ್ಲಿ ನಡೆದ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ವೇಳೆ ಡೀಸೆಲ್ ಎಂಬ ಹೆಸರಿನ ಬೆಲ್ಜಿಯನ್ ಶೆಫರ್ಡ್ ಹೆಣ್ಣು ಶ್ವಾನ ಉಗ್ರರ ಗುಂಡೇಟಿಗೆ ಬಲಿಯಾಗಿ ಸಾವನ್ನಪ್ಪಿದೆ. ಪೊಲೀಸ್ ಅಧಿಕಾರಿಗಳನ್ನು ಉಳಿಸಿ ತನ್ನ ಜೀವವನ್ನು ಫ್ರಾನ್ಸ್ ಗಾಗಿ ನೀಡಿದ ಡೀಸೆಲ್ ಈ ಮೂಲಕ ಜನರ ಹೃದಯವನ್ನು ಗೆದ್ದಿದೆ.
ಪ್ಯಾರಿಸ್ ದಾಳಿ ನಡೆಸಿದ ಶಂಕಿತ ಉಗ್ರರ ಪತ್ತೆಗಾಗಿ ಸೈಂಟ್ ಡೆನಿಸ್ ಅಪಾರ್ಟ್ಮೆಂಟ್ವೊಂದರಲ್ಲಿ ವಿಶೇಷ ಪೊಲೀಸ್ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಏಳು ವರ್ಷ ಪ್ರಾಯದ ಡೀಸೆಲ್ ಕೂಡ ಭಾಗಿಯಾಗಿತ್ತು. ಫ್ರಾನ್ಸ್ ರಕ್ಷಣೆಯ ಹೋರಾಟದಲ್ಲಿ ತನ್ನ ಪ್ರಾಣವನ್ನು ತ್ಯಾಗ ಮಾಡಿದೆ. ಈ ಕಾರ್ಯಾಚರಣೆಯಲ್ಲಿ 5 ಮಂದಿ ಪೊಲೀಸರು ಗಾಯಗೊಂಡಿದ್ದರು.
ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಕಾಳಗದಲ್ಲಿ ಈ ಶ್ವಾನ ಸಾವನ್ನಪ್ಪಿದೆ ಎಂಬ ಸುದ್ದಿ ವಿಶ್ವದಾದ್ಯಂತ ಹರಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಲಕ್ಷಾಂತರ ಮಂದಿ ಟ್ವಿಟರ್ ಹ್ಯಾಶ್ಟ್ಯಾಗ್ ‘#JeSuisChien’ ಹೆಸರಿನಲ್ಲಿ ಡೀಸೆಲ್ಗೆ ಗೌರವ ಸಲ್ಲಿಸಿದಾರೆ. ಡೀಸೆಲ್ನ ಕೆಚ್ಚೆದೆಯ ತ್ಯಾಗಕ್ಕೆ ಬೆಂಬಲ ಮತ್ತು ಕೃತಜ್ಞತೆಯನ್ನು ತೋರಿದ್ದಾರೆ.
ಡೀಸೆಲ್ನ ಮರಣ ಒಂದು ದುರಂತ. ಆದರೆ ಶೌರ್ಯ ಎನ್ನುವುದು ಯಾವುದೇ ರೂಪ, ಗಾತ್ರಗಳಲ್ಲಿ ಕಾಣಿಸಬಲ್ಲದು ಎಂಬುದನ್ನು ಈ ಶ್ವಾನ ತೋರಿಸಿಕೊಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.