ಚೆನ್ನೈ: ಟ್ಯಾಕ್ಸಿ ಆಯೋಜಕ ಓಲಾ ಇಲ್ಲಿನ ಜಲಾವೃತ ಪ್ರದೇಶಗಳಲ್ಲಿನ ಜನರ ರಕ್ಷಣೆ ಮತ್ತು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲು ದೋಣಿಗಳ ಸೇವೆಯನ್ನು ಅಳವಡಿಸಿದೆ.
ವೃತ್ತಿಪರ ನಾವಿಕರು ಮತ್ತು ಮೀನುಗಾರರ ಸಹಾಯದಿಂದ ದೋಣಿಗಳ ಸಹಾಯದಿಂದ ಜನರ ರಕ್ಷಣೆ, ಆಹಾರ ಮತ್ತು ಕುಡಿಯುವ ನೀರು ಸರಬರಾಜನ್ನು ಉಚಿತವಾಗಿ ಒದಗಿಸಿದೆ. ಈ ದೋಣಿಗಳು ಇಬ್ಬರು ನಾವಿಕರು, ಛತ್ರಿಗಳನ್ನು ಅಳವಡಿಸಿಕೊಂಡಿದ್ದು, ಇದು ಐದರಿಂದ ಒಂಬತ್ತು ಮಂದಿಯನ್ನು ಒಂದೇ ಬಾರಿಗೆ ಸಾಗಿಸುವ ಸಾಮರ್ಥ್ಯ ಹೊಂದಿದೆ.
ಚೆನ್ನೈ ನಗರದಲ್ಲಿ ಸಾರಿಗೆಗೆ ಅಧಿಕ ಬೇಡಿಕೆ ಇದ್ದು, ಜಲಾವೃತ ಪ್ರದೇಶಗಳಲ್ಲಿ ಜನರ ರಕ್ಷಣೆಗೆ ಸ್ಥಳೀಯ ಮಧ್ಯವರ್ತಿಗಳ ಜೊತೆ ನಿಕಟವಾಗಿ ಕಾರ್ಯ ನಿರ್ವಹಿಸುತ್ತಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.