ಗುರ್ಗಾಂವ್ : ಹೃದಯ ಸಂಬಂಧಿ ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವಿಶ್ವ ಹಿಂದು ಪರಿಷತ್ನ ಹಿರಿಯರಾದ ಅಶೋಕ್ ಸಿಂಘಾಲ್ರವರು ಮಂಗಳವಾರದಂದು ದೈವಾಧೀನರಾಗಿದ್ದಾರೆ ಎಂದು ಪ್ರವೀಣ್ ತೊಗಾಡಿಯಾ ತಿಳಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಆರೋಗ್ಯ ಸಮಸ್ಯೆ ಉಲ್ಬಣಿಸಿದ್ದು, ಸಿಂಘಾಲ್ರವರು ಕಳೆದ ಶನಿವಾರ ಗುರ್ ಗಾಂವ್ನ್ ಮೇಧಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉಸಿರಾಟದ ತೊಂದರೆಯಿಂದ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
1926ರ ಸೆಪ್ಟೆಂಬರ್ 15 ರಂದು ಆಗ್ರಾದಲ್ಲಿ ಜನಿಸಿದ ಇವರು ಬನಾರಸ್ ಹಿಂದು ವಿಶ್ವ ವಿದ್ಯಾನಿಲಯದ ಪದವೀಧರರಾಗಿದ್ದರು.
1942 ರಲ್ಲಿ ಆರ್ಎಸ್ಎಸ್ ಸೇರ್ಪಡೆಗೊಂಡು ಉತ್ತರ ಪ್ರದೇಶ, ದೆಹಲಿ, ಹರಿಯಾಣದ ಪ್ರಾಂತ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದರು. 1980 ರಿಂದ ವಿಶ್ವ ಹಿಂದು ಪರಿಷತ್ನಲ್ಲಿ ಜವಾಬ್ದಾರಿಯನ್ನು ಹೊಂದಿದ್ದರು. ಅಯೋಧ್ಯಾ ರಾಮಮಂದಿರ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಮುಂಚೂಣಿಯ ನಾಯಕತ್ವವನ್ನು ವಹಿಸಿದ್ದರು. 1984 ರಿಂದ 2011 ರವರೆಗೆ ವಿಹಿಂಪದ ಅಂತರಾಷ್ಟ್ರೀಯ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದರು.
ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ಸೇರಿದಂತೆ 200 ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಪ್ರವೇಶ ದೊರಕಿಸಿಕೊಡುವಲ್ಲಿ ಶ್ರಮಿಸಿದ್ದರು.
ಮೋಹನ್ಜಿ ಭಾಗವತ್, ಸುರೇಶ್ ಭಯ್ಯಾಜಿ ಜೋಶಿ, ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಅನೇಕ ಗಣ್ಯರು, ಅಪಾರ ಸಂಖ್ಯೆಯ ಕಾರ್ಯಕರ್ತರು ಅಶೋಕ್ ಸಿಂಘಾಲ್ರವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಇದು ವಿಶ್ವ ಹಿಂದು ಪರಿಷತ್ಗೆ ತುಂಬಲಾರದ ನಷ್ಟ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.