ಅಂಟಾಲ್ಯಾ: ಕಪ್ಪು ಹಣ ಮತ್ತು ಭ್ರಷ್ಟಾಚಾರದ ಬಗ್ಗೆ ಭಾರತ ಸಹನೆಯನ್ನು (zero tolerance) ಹೊಂದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಟರ್ಕಿಯಲ್ಲಿ ನಡೆದ ೨ ದಿನಗಳ ಜಿ-೨೦ ಶೃಂಗಸಭೆಯಲ್ಲಿ ಈ ವಿಷಯ ತಿಳಿಸಿದ್ದಾರೆ.
ವಿದೇಶಗಳಲ್ಲಿ ಇರಿಸಲಾಗಿರುವ ಆಸ್ತಿ ಮತ್ತು ಆದಾಯಗಳ ನಿರ್ವಹಣೆಗೆ ಹೊಸ ಕಾನೂನು ಜಾರಿಗೆ ತರಲಾಗಿದೆ. ಬ್ಯಾಂಕಿಂಗ್ ಮತ್ತು ಆರ್ಥಿಕ ಕ್ಷೇತ್ರದ ಸ್ಥಾಪಕತ್ವ ಹೆಚ್ಚಿಸುವ ಕೆಲವು ಪ್ರಮುಖ ಅಂಶಗಳ ರೂಪುರೇಶೆಗಳನ್ನು ವಿವರಿಸುದ ಅವರು, ಅಭಿವೃದ್ಧಿಶೀಲ ರಾಷ್ಟ್ರಗಳು ಬ್ಯಾಂಕಿಂಗ್ ಕ್ಷೇತ್ರದ ಆರ್ಥಿಕತೆ ಮತ್ತು ನಿರ್ವಹಣೆಯ ಮೇಲೆ ಬಂಡವಾಳದ ಅಗತ್ಯತೆಯನ್ನು ನಿರ್ಬಂಧಿಸಬಾರದು. ಬದಲಾಗಿ ಪರಿಣಾಮಕಾರಿ ಮೇಲ್ವಿಚಾರಣೆ ಹಾಗೂ ತಂತ್ರಜ್ಞಾನದ ಉತ್ತಮ ಬಳಕೆಯೊಂದಿಗೆ ಬಂಡವಾಳದ ಅಗತ್ಯಗಳನ್ನು ಕಡಿಮೆ ಮಾಡಬಹುದು ಎಂದು ಈ ವೇಳೆ ಹೇಳಿದ್ದಾರೆ.
ಸ್ವದೇಶಕ್ಕೆ ಕಪ್ಪು ಹಣದ ವಾಪಸಾತಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹಕಾರದ ಅಗತ್ಯವಿದೆ. ನಾವು ಬ್ಯಾಂಕಿಂಗ್ ವಹಿವಾಟಿನ ರಹಸ್ಯಗಳನ್ನು ಬಹಿರಂಗಪಡಿಸಬೇಕು ಎಂದು ಹೇಳಿದ್ದಾರೆ. ಕಪ್ಪು ಹಣ ಪಿಡುಗು ವಿರುದ್ಧ ಹೋರಾಡಲು ಜಾಗತಿಕ ಸಹಕಾರ ನೀಡುವಂತೆ ಪ್ರಧಾನಿ ಮೋದಿ ಜಿ-೨೦ ರಾಷ್ಟ್ರಗಳಲ್ಲಿ ಕೋರಿದ್ದಾರೆ.
ಐಎಂಎಫ್ ಕೋಟಾ ಸುಧಾರಣೆಗಳನ್ನು ತಕ್ಷಣ ಅನುಷ್ಠಾನಕ್ಕೆ ತರುವ ಪ್ರಯತ್ನದೊಂದಿಗೆ ಭಾರತದಂತಹ ಉದಯೋನ್ಮುಖ ರಾಷ್ಟ್ರಗಳ ಮಾರುಕಟ್ಟೆಗಳ ಅಭಿವೃದ್ಧಿಗೆ ಆಳ್ವಿಕೆ ಆಧಾರಿತ ಜಾಗತಿಕ ವ್ಯಾಪಾರ ವ್ಯವಸ್ಥೆಯನ್ನು ಬಲಪಡಿಸುವ ಕ್ರಮ ಕೈಗೊಳ್ಳುವಂತೆ ಕರೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.