ವಾಷಿಂಗ್ಟನ್: ಸುಮಾರು 132,888 ಭಾರತೀಯ ವಿದ್ಯಾರ್ಥಿಗಳು ಅಮೇರಿಕದಲ್ಲಿ ಅಧ್ಯಯನ ನಡೆಸುತ್ತಿದ್ದು, ಕಳೆದ ವರ್ಷಕ್ಕಿಂತ ಶೇ.30 ಏರಿಕೆಯೊಂದಿಗೆ ದಾಖಲೆ ನಿರ್ಮಿಸಿದೆ. ಇದರೊಂದಿಗೆ ಅಮೇರಿಕದ ಆರ್ಥಿಕತೆಯಲ್ಲೂ ಅಂದಾಜು ೩.೬ ಬಿಲಿಯನ್ ಡಾಲರ್ ಹೆಚ್ಚಳ ಕಂಡಿದೆ ಎಂದು ಓಪನ್ ಡೋರ್ಸ್ ರಿಪೋರ್ಟ್ ವರದಿ ಮಾಡಿದೆ.
ಚೀನಾದ 304,040 ವಿದ್ಯಾರ್ಥಿಗಳು ಅಮೇರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದು, ಶೇ.11 ಏರಿಕೆಯೊಂದಿಗೆ ಅಮೇರಿಕದ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಹೊಂದಿರುವ ಮೊದಲ ರಾಷ್ಟ್ರವೆನಿಸಿದೆ. ಆದರೆ ಈ ಬಾರಿ ಶೇ.30 ರಷ್ಟು ಏರಿಕೆ ಕಂಡಿರುವ ಭಾರತ ಚೀನಾವನ್ನು ಹಿಂದಿಕ್ಕಿದೆ. ಓಪನ್ ಡೋರ್ ಯೋಜನೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲಿ ವ್ಯಾಪಿಸಿದೆ ಎಂದು ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆ ವರದಿ ಮಾಡಿದೆ.
ಕಳೆದ ಬಾರಿ 2000-01ರಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 50,000 ಕ್ಕೂ ಮೀರಿ ಶೇ.29.1ರಷ್ಟು ಏರಿಕೆ ಕಂಡಿತ್ತು. 2014-15ರಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ.67ರಷ್ಟು ಹೆಚ್ಚಳದೊಂದಿಗೆ ಚೀನಾ ಮತ್ತು ಭಾರತದ ಪಾಲುದಾರಿಕೆ ಹೊಂದಿದ್ದು, ಅಮೇರಿಕದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಒಟ್ಟು ಶೇ.45ರಷ್ಟು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿದ್ದಾರೆ ಎಂದು ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.