ಮುಂಬಯಿ: ಸಾಫ್ಟ್ವೇರ್ ದಿಗ್ಗಜ ಮೈಕ್ರೋಸೋಫ್ಟ್ ಮಹಾರಾಷ್ಟ್ರದ ಡಿಜಿಟಲ್ ಹಳ್ಳಿಗಳು, ಸ್ಮಾರ್ಟ್ ಎಂಐಡಿಸಿ ಮತ್ತು ಪುಣೆಯಲ್ಲಿ ಸೈಬರ್ ಭದ್ರತಾ ಕೇಂದ್ರ ಅಭಿವೃದ್ಧಿಗೆ ಪಾಲುದಾರರಾಗಲು ಒಪ್ಪಿಗೆ ಸೂಚಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಸೀಯಾಟೆಲ್ನ ಮೈಕ್ರೋಸೋಫ್ಟ್ ಸೈಬರ್ ಅಪರಾಧ ಕೇಂದ್ರಕ್ಕೆ ಭೇಟಿ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಫಡ್ನವಿಸ್ ಅವರು ಮೈಕ್ರೋಸೋಫ್ಟ್ ಸಿಇಓ ಸತ್ಯಾ ನಡೆಲ್ಲಾ ಜೊತೆ ಅಭಿವೃದ್ಧಿ ಯೋಜನೆಗಳ ಒಪ್ಪಂದ ಮಾಡಿಕೊಂಡಿದ್ದಾರೆ.
ಮಾಲೇಘಾಟ್ನಲ್ಲಿ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಆದಿವಾಸಿಗಳು ಮತ್ತು ಬುಡಕಟ್ಟು ಪ್ರದೇಶಗಳ ಬಡವರ ಉನ್ನತಿ ಹಾಗೂ ಅಪೌಷ್ಟಿಕತೆ ತಂತ್ರಜ್ಞಾನ ರೂಪಿಸಲು ಸಹಕರ ಸೇರಿದಂತೆ ನಿರ್ಣಾಯಕ ಕ್ಷೇತ್ರಗಳ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ ಎಂದು ಫಡ್ನವಿಸ್ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಸ್ಮಾರ್ಟ್ ಸಿಟಿಯಂತೆ ಸ್ಮಾರ್ಟ್ ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಅಭಿವೃದ್ಧಿಗೊಳಿಸಲು ಮೈಕ್ರೋಸೋಫ್ಟ್ಒಪ್ಪಿಗೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.