ನವದೆಹಲಿ: ದೇಶದಲ್ಲಿ ’ಅಸಹಿಷ್ಣುತೆ’ ಕುರಿತು ಸಾಹಿತಿಗಳು ಧ್ವನಿ ಎತ್ತುತ್ತಿದ್ದು, ನಟ ಅನುಪಮ್ ಖೇರ್ ಇದರ ವಿರುದ್ಧ ಪ್ರತಿಭಟನಾ ಮೆರವಣಿಗೆಯ ನೇತೃತ್ವವನ್ನು ವಹಿಸಲಿದ್ದಾರೆ. ಪ್ರತಿಭಟನಾಕಾರರು ಮೆರವಣಿಗೆ ಮೂಲಕ ರಾಷ್ಟ್ರಪತಿ ಭವನಕ್ಕೆ ತೆರಳಲಿದ್ದಾರೆ.
ಅಸಹಿಷ್ಣುತೆ ಕುರಿತ ಸಾಹಿತಿಗಳ ಚರ್ಚೆಗಳು ಮತ್ತು ಅವರ ವಿರೋಧಗಳು ದೇಶದ ಪ್ರತಿಷ್ಠೆಗೆ ಧಕ್ಕೆ ಉಂಟುಮಾಡುವ ಪ್ರಯತ್ನವಾಗಿದೆ. ಇದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಗುರಿಯಾಗಿಸುವ ಉದ್ಧೇಶವಾಗಿದೆ ಎಂದು ಅವರು ಹೇಳಿದ್ದಾರೆ.
ಯಾರಿಗೂ ನಮ್ಮ ದೇಶ ಅಸಹಿಷ್ಣುತೆಯಿಂದ ಕೂಡಿದೆ ಎನ್ನುವ ಹಕ್ಕಿಲ್ಲ. ನಾವು ಜಾತ್ಯತೀತರಾಗಿದ್ದು, ಏಕಪಂಕ್ತೀಯ ವಿರೋಧಗಳನ್ನು ನಂಬುದಿಲ್ಲ. ಈ ವಿಷಯಗಳನ್ನು ಕೇವಲ ಫೇಸ್ಬುಕ್, ಟ್ವಿಟರ್ಗಳಲ್ಲಿ ಚರ್ಚಿಸಲು ಸಾಧ್ಯವಿಲ್ಲ. ಇದನ್ನು ವೈಯಕ್ತಿಕವಾಗಿ ಚರ್ಚಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ದೇಶಭಕ್ತಿ ನಮಗೆ ಪ್ರತಿಷ್ಠೆಯ ಭಾವನೆ ನೀಡುತ್ತದೆ. ಈ ಐತಿಹಾಸಿಕ ಜಾಥಾದಲ್ಲಿ ಭಾಗವಹಿಸಲು ರಾಷ್ಟ್ರೀಯ ಉದ್ಯಾನವನಕ್ಕೆ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ ಎಮದು ಅವರು ಟ್ವೀಟರ್ ಮೂಲಕ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.