ಗುವಾಹಟಿ: ಬಿಜೆಪಿ ಕೇಂದ್ರ ಕ್ರೀಡಾ ಸಚಿವ ಸರ್ಬಾನಂದ ಸೋನೊವಾಲ್ ಜೊತೆ ಗುರುವಾರದಂದು ಮಾತುಕತೆ ನಡೆಸಿ ಬಿಜೆಪಿ ಪಕ್ಷಕ್ಕೆ ಸೇರುವ ಆಸಕ್ತಿ ವ್ಯಕ್ತಪಡಿಸಿದ್ದ ಅಸ್ಸಾಂನ ಒಂಬತ್ತು ಕಾಂಗ್ರೆಸ್ ಶಾಸಕರು ಇಂದು ಅಧಿಕೃತವಾಗಿ ಬಿಜೆಪಿ ಪಕ್ಷವನ್ನು ಸೇರಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಈ ಒಂಬತ್ತು ಶಾಸಕರ ವಿರುದ್ಧ ಕಾಂಗ್ರೆಸ್ ಶಿಸ್ತು ಕ್ರಮ ಕೈಗೊಂಡಿತ್ತು. ಶಾಸಕರಾದ ಪ್ರಧಾನ್ ಬುರವಾ, ಪಲ್ಲಬ್ ಲೋಚನ್ದಾಸ್, ಪಿಯೂಶ್ ಹಝಾರಿಕಾ, ಅಬು ತಾಹಿರ್ ಬೆಪಾರಿ, ಜಯಂತ್ ಮಲ್ಲಾ ಬರುವಾ, ರಾಜೇನ್ ಬೋರ್ಥಾಕೂರ್, ಬೊನಿಂದಾ ಸೈಕಿಯಾ ಕ್ರಿಪಾಂತ್ ಮಲ್ಲಾಹ್, ಬೋಲಿನ್ ಚೇಟಿಯಾ ಬಿಜೆಪಿ ಸೇರಿದ್ದಾರೆ.
ಈ ಒಂಬತ್ತು ಶಾಸಕರು ಬಿಜೆಪಿ ಪಕ್ಷ ಸೇರಿದ್ದು ತರುಣ್ ಗೋಗೊಯ್ ನೇತೃತ್ವದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.