ಬೆಂಗಳೂರು : ಸೆಕ್ಯುಲರ್ ಸಮೂಹ ಸನ್ನಿಯಾದ ಪ್ರಶಸ್ತಿ ಹಿಂತಿರುಗಿಸುವಿಕೆ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರನ್ನು ಹಾಳು ಮಾಡುವ ಸಂಚನ್ನು ವಿರೋಧಿಸಿ ’ಕ್ರಿಯೇಟಿವ್ ಇಂಡಿಯಾ’ ಸಂಘಟನೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದೆ.
ನವೆಂಬರ್ 7 ರ ಶನಿವಾರದಂದು 11 ಗಂಟೆಗೆ ಫ್ರೀಡಂ ಪಾರ್ಕ್ನಿಂದ ಹೊರಟು ರಾಜಭವನದವರೆಗೆ ಕಾಲ್ನಡಿಗೆ ಜಾಥಾ ನಡೆಯಲಿದ್ದು, ನಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಗುವುದು.
ಭಾರತವು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆಯುತ್ತ ಬೆಳವಣಿಗೆಯ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಈ ಸಂದರ್ಭದಲ್ಲಿ, ದೇಶದ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಳುಗೆಡವುತ್ತಿರುವ ’ಸ್ವ-ಹಿತಾಸಕ್ತಿಯ ಒಂದಿಡಿ ಗುಂಪಿನ’ ಎದುರು ದೇಶ ಮಂಡಿಯೂರಲಾರದು ಎಂಬ ಸಂದೇಶವನ್ನು ಜನ ಸಾಮಾನ್ಯರಾದ ನಾವು ನೀಡೋಣ. ಇಂಥ ಶಕ್ತಿಗಳ ವಿರುದ್ಧ ಹೋರಾಡುತ್ತಿರುವ ಪ್ರಧಾನಿ ಮೋದಿಯವರೊಂದಿಗೆ ಹಾಗೂ ದೇಶದೊಂದಿಗೆ ನಿಲ್ಲುವುದು ಜವಾಬ್ದಾರಿಯುತ ಭಾರತೀಯನ ಕರ್ತವ್ಯವೂ ಹೌದು.
ಜಾಥಾದಲ್ಲಿ ಶತವಾಧಾನಿ ಗಣೇಶ್, ಡಾ.ಚಿದಾನಂದ ಮೂರ್ತಿ, ಸುಮತೀಂದ್ರ ನಾಡಿಗ, ಚಿತ್ರನಟರಾದ ಅವಿನಾಶ್, ಜಗ್ಗೇಶ್, ತಾರಾ, ಮಾಳವಿಕ, ಜೈ ಜಗದೀಶ್ ಹಾಗೂ ಬೇರೆ ಬೇರೆ ರಂಗದ ಕಲಾವಿದರು, ಬರಹಗಾರರು, ಸಮಾಜ ಸೇವಕರು ಭಾಗವಹಿಸಲಿದ್ದಾರೆ.
ಭಾರತ ಸುರಕ್ಷಿತವಾಗಿದೆ ಎಂಬ ಸಂದೇಶವನ್ನು ಸಾರುವ ಜಾಥಾ ಇದಾಗಲಿದೆ. ಒಗ್ಗಟ್ಟಾಗಿ ಎಲ್ಲರೂ ಜಾಥಾದಲ್ಲಿ ಪಾಲ್ಗೊಳ್ಳಲು ವಿನಂತಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.