ಗುಜಾರಾತ್ : ಖುರಾನ್ ಅನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಖುರಾನ್ನಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ.ಗುಜರಾತಿನ ಭಾವನಗರ ನಿವಾಸಿ ಜಾಫರ್ ಅಬ್ಬಾಸ್ ಮರ್ಚೆಂಟ್ ಮತ್ತೊಂದು ಮದುವೆಯಾಗಿದ್ದು, ತನ್ನ ಪತಿ ಒಪ್ಪಿಗೆ ಇಲ್ಲದೆ ಇನ್ನೊಂದು ಮದುವೆಯಾಗಿದ್ದಕ್ಕಾಗಿ ಅಬ್ಬಾಸ್ರ ಮೊದಲ ಪತ್ನಿ ಪ್ರಕರಣವನ್ನು ದಾಖಲಿಸಿದ್ದರು.
ಪ್ರಕರಣ ಸಂಬಂಧ ಕೆಳನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿಲಾಗಿತ್ತು. ಅದಕ್ಕೆ ನ್ಯಾಯಾಲಯವು ಮುಸ್ಲಿಂ ಮಹಿಳೆಯರನ್ನು ಅಮಾನುಷವಾಗಿ ನೋಡುವಂತೆ ಹೇಳಿಲ್ಲ ಅದನ್ನು ನಿಮ್ಮ ಸ್ವಾರ್ಥಕ್ಕೆ ತಕ್ಕಂತೆ ಬದಲಾಯಿಸಬೇಡಿ ಎಂದಿತ್ತು. ಇದನ್ನು ಪ್ರಶ್ನಿಸಿ ಅಬ್ಬಾಸ್ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು. ಆದರೆ ಹೈಕೋರ್ಟ್ ಬಹುಪತ್ನಿತ್ವ ಭಾರತೀಯ ಕಾನೂನಿಗೆ ವಿರುದ್ಧವಾಗಿದೆ ಎಂದು ಹೇಳಿ ಕೆಳನ್ಯಾಯಾಲಯದ ತೀರ್ಮಾನವನ್ನು ಎತ್ತಿಹಿಡಿದಿದೆ.
ಸಮಾನ ನಾಗರೀಕ ಸಂಹಿತೆ ತರಲು ಕೇಂದ್ರ ಸರಕಾರಕ್ಕೆ ಇದು ಒಂದು ಅವಕಾಶ. ಆದರೆ ಅದನ್ನು ತರಬೇಕೇ ಬೇಡವೇ ಎನ್ನುವುದು ಸರ್ಕಾರಕ್ಕೆ ಬಿಟ್ಟಿರುವುದು. ಆದರೆ ಬೆಳೆಯುತ್ತಿರುವ ಆಧುನಿಕ ಭಾರತಕ್ಕೆ ಸಮಾನ ನಾಗರೀಕ ಸಂಹಿತೆಯ ಅವಶ್ಯಕತೆ ಹೆಚ್ಚಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.