ತಮಿಳುನಾಡು : ಸರಕಾರಿ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳಿಗೆ ಮೂರನೇ ಕ್ಯಾಟಗರಿಯನ್ನು ಸೇರಿಸಬೇಕು ಎಂದು ತಮಿಳುನಾಡು ಯೂನಿಫಾರ್ಮ್ಡ್ ಸರ್ವೀಸ್ ನೇಮಕಾತಿ ಮಂಡಳಿಗೆ ಮುಖ್ಯ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ಪುಷ್ಪಾ ಸತ್ಯನಾರಾಯಣ ಅವರನ್ನೊಳಗೊಂಡ ನ್ಯಾಯ ಪೀಠ ಮಹತ್ವದ ಆದೇಶ ನೀಡಿದೆ.
ಎಸ್ ಐ ಹುದ್ದೆಗೆ ಕೆ.ಪ್ರತಿಕಾ ಯಶಿನಿ ಅರ್ಜಿಸಲ್ಲಿಸಿದ್ದು, ಅದು ತಿರಸ್ಕಾರಗೊಂಡ ಕಾರಣ ಪ್ರತಿಕಾ ಯಶಿನಿ ಕೋರ್ಟ್ನಲ್ಲಿ ಕಾನೂನು ಹೋರಾಟನಡೆಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕಾ ಯಶಿನಿಗೆ ಎಸ್ ಐ ಆಗುವ ಎಲ್ಲಾ ಅರ್ಹತೆಗಳಿದ್ದು ಎಸ್ ಐ ಹುದ್ದೆ ನೀಡಬೇಕೆಂದು ಮದ್ರಾಸ್ ಹೈಕೋರ್ಟ್ಹೇಳಿದೆ.
ಈ ಮೂಲಕ ಪ್ರತಿಕಾ ಯಶಿನಿ ಮೊದಲ ತೃತೀಯ ಲಿಂಗಿ ಎಸ್.ಐ. ಆಗಿದ್ದಾರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.