ನವದೆಹಲಿ: ಚರ್ಚೆಯ ಕೇಂದ್ರಬಿಂದುವಾಗಿರುವ ಅಸಹಿಷ್ಣುತೆ ವಿಚಾರದಲ್ಲಿ ಹಲವು ಬರಹಗಾರರು, ಕಲಾವಿದರು ಆಕ್ರೋಶ ವ್ಯಕ್ತಪಡಿಸಿ ಅನೇಕರು ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿರುವುದು ನಡೆಯುತ್ತಲೇ ಇದೆ. ಇದನ್ನು ವಿರೋಧಿಸಿ ಕೆಲವು ಚಿತ್ರನಿರ್ಮಾಪಕರು, ಇತಿಹಾಸಕಾರರು ಹಾಗೂ ಹಲವು ಸಾಹಿತಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಕ್ಕೆ ನಿಲ್ಲುವುದಾಗಿ ವಿವರವಾಗಿ ಹೇಳಿಕೆ ನೀಡಿದ್ದಾರೆ.
ಸುಮಾರು 36 ಮಂದಿ ಸಾಹಿತಿಗಳು, ಉನ್ನತ ಸಂಸ್ಥೆಗಳ ಪ್ರಮುಖರು ಜಂಟಿ ಹೇಳಿಕೆಗೆ ಸಹಿ ಹಾಕುವ ಮೂಲಕ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಕೆಲವು ವಾರಗಳಿಂದ ದೇಶದಲ್ಲಿ ಕುತೂಹಲಕಾರಿ ಪ್ರದರ್ಶನಗಳು ನಡೆಯುತ್ತಿವೆ. ದೇಶದ ಸಾಹಿತಿಗಳ ವಿಭಾಗವೊಂದು ಅಸಹಿಷ್ಣುತೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದೆ. ಭಾರತೀಯ ನಾಗರಿಕತೆಯನ್ನು ಮುಂದುವರೆಸುವಂತೆ ಬಿಂಬಿಸುತ್ತಿರುವ ಕಾಂಗ್ರೆಸ್, ಮಾರ್ಕ್ಸಿಸ್ಟ್, ಲೆನಿನ್ ವಾದಿಗಳಾಗಿದ್ದಾರೆ. ಅದರಲ್ಲಿ ಮಾವೋವಾದಿಗಳ ಒಂದು ಗುಂಪು ಇದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ದಾದ್ರಿ ಪ್ರಕರಣ, ದಾಭೋಲ್ಕರ್ ಮತ್ತು ಕಲಬುರ್ಗಿ ಹತ್ಯೆ ಪ್ರಕರಣಗಳಿಗೂ ಕೇಂದ್ರ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೂ ಕೇಂದ್ರ ಸರ್ಕಾರವನ್ನು ದೂರಲಾಗುತ್ತಿದೆ. ಈ ಪ್ರಕರಣಗಳು ರಾಜ್ಯ ಸರ್ಕಾರದ ಹೊಣೆಯಾಗಿದ್ದು, ರಾಜ್ಯ ಸರ್ಕಾರಗಳೇ ಅದನ್ನು ಪರಿಹರಿಸಬೇಕು ಎಂದು ಹೇಳಿದೆ. ಮೋದಿ ಅವರನ್ನು ಟೀಕಿಸುತ್ತಿರುವ ಸಾಹಿತಿಗಳ ವರ್ಗ, 1984ರ ಗಲಭೆಯ ಸಂಬಂಧ ಸಿಖ್ಖರಿಗೆ ಈ ವರೆಗೆ ನ್ಯಾಗ ದೊರೆತಿಲ್ಲ ಎಂಬುದನ್ನು ಸ್ಮರಿಸುತ್ತಿಲ್ಲ. ಅಲ್ಲದೇ 2007ರ ಪಶ್ಚಿಮ ಬಂಗಾಳದಲ್ಲಿ ಎಡರಂಗದ ಆಡಳಿತ ಸಂದರ್ಭ ನಡೆದ ರೈತರ ಹತ್ಯೆ ಬಗ್ಗೆ ಪ್ರಶ್ನಿಸುತ್ತಿಲ್ಲ ಎಂದು ಹೇಳಿದ್ದಾರೆ.
ಐಸಿಸಿಆರ್ ಅಧ್ಯಕ್ಷ ಲೋಕೇಶ್ ಚಂದ್ರ, ಲೇಖಕ ಹಾಗೂ ಕಾದಂಬರಿಕಾರರಾದ ಸಾಹಿತ್ಯ ಅಕಾಡೆಮಿಯ ಎಸ್.ಎಲ್. ಭೈರಪ್ಪ, ಮಹಾತ್ಮಾ ಗಾಂಧಿ ಅಂತಾರಾಷ್ಟ್ರೀಯ ಹಿಂದಿ ವಿಶ್ವವಿದ್ಯಾಲಯ, ಪ್ರೋ. ವಾರ್ಧಾ ಕಪಿಲ್ ಕಪೂರ್, ಐ.ಸಿ.ಎಚ್.ಆರ್ ಸದಸ್ಯ ದಿಲೀಪ್ ಕೆ. ಚಕ್ರವರ್ತಿ, ಬೆಂಗಳೂರು ಐ.ಐ.ಎಸ್.ಸಿ.ಯ ಕೆ. ಗೋಪಿನಾಥ್ ಮೊದಲಾದವರು ಸಹಿ ಹಾಕಿರುವುದಾಗಿ ಜಂಟಿ ಪ್ರಕಟಣೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.