ಇಂಡೋನೇಷ್ಯಾ : ಮುಂಬೈ ಪೊಲೀಸರ ಮೇಲೆ ನನಗೆ ನಂಬಿಕೆ ಇಲ್ಲ. ಕೆಲ ಜನರು ದಾವೂದ್ ಪರ ಇದ್ದಾರೆ. ಆದ್ದರಿಂದ ದಾವುದ್ ಸಹಚರ ಚೋಟಾ ಶಕೀಲ್ ನಿಂದ ನನಗೆ ಜೀವ ಭೀತಿ ಇದೆ ಎಂದು ಕುಖ್ಯಾತ ಪಾತಕಿ ಛೋಟಾ ರಾಜನ್ ಹೇಳಿದ್ದಾನೆ.
ಇಂದು ಇಂಡೋನೇಷಿಯಾನಿಂದ ಭಾರತಕ್ಕೆ ಮರಳಲಿರುವ ಛೋಟಾ ರಾಜನ್ ಭಾರತಕ್ಕೆ ಮರಳುವ ಮುನ್ನ ಇಂಡೋನೇಷಿಯಾದಲ್ಲಿ ಪ್ರತಿಕ್ರಿಯಿಸಿದ್ದು ಹೀಗೆ. ಅಲ್ಲದೇ ತಾನು ಮುಂಬೈಗಿಂತ ದೆಹಲಿಯಲ್ಲಿ ಹೆಚ್ಚು ಸುರಕ್ಷಿತನಾಗಿರಲಿದ್ದೇನೆ ಎಂದು ಹೇಳಿದ್ದು ಮಾತ್ರವಲ್ಲ ಸರಕಾರ ತನ್ನ ಇಷ್ಟದಂತೆ ಎಲ್ಲಿಬೇಕಾದರೂ ವಿಚಾರಣೆಗೊಳಪಡಿಸಬಹುದು. ಆದರೆ ತನಗೆ ನ್ಯಾಯ ದೊರಕಬೇಕೆಂದು ಹೇಳಿದ್ದಾನೆ.
ಈ ಮೂಲಕ ಮುಂಬೈ ಪೊಲೀಸ್ ಇಲಾಖೆಯಲ್ಲಿ ದಾವುದ್ ಪರ ಇರುವವರಾರು ಎನು ಎಂಬ ಬಗ್ಗೆ ತನಿಖೆಗಳು ಆರಂಭಗೊಳ್ಳಲಿದೆ. ಭಾರತದಲ್ಲಿ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಛೋಟಾ ರಾಜನ್ನನ್ನು ಮುಂಬೈ ಪೊಲೀಸರು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ಛೋಟಾ ರಾಜನ್ ದಾವುದ್ ಸಹಚರ ಮತ್ತು ಆಪ್ತನಾಗಿದ್ದು 1993 ಮುಂಬೈ ಬಾಂಬ್ ದಾಳಿಯ ಬಳಿಕ ದಾವುದ್ನಿಂದ ದೂರವಾಗಿದ್ದ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.