ನವದೆಹಲಿ : ಕುಖ್ಯಾತ ಪಾತಕಿ ಛೋಟಾ ರಾಜನ್ನನ್ನು ಭಾರತಕ್ಕೆ ಕರೆತರಲು ಸಿಬಿಐ, ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ತಂಡ ಅಗತ್ಯ ದಾಖಲೆಗಳೊಂದಿಗೆ ಇಂದು ಇಂಡೋನೇಷಿಯಾ ತಲುಪಿದೆ.
ಭೂಗತ ಪಾತಕಿ ಛೋಟಾ ರಾಜನ್ ಭಾರತದಲ್ಲಿ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಅತನನ್ನು ಭಾರತಕ್ಕೆ ಕರೆತರಲು ಎರಡೂ ದೇಶಗಳ ನಡುವೆ ತಯಾರಿಗಳು ನಡೆಯುತ್ತಿದೆ. ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಛೋಟಾ ರಾಜನ್ನನ್ನು ಭೇಟಿಯಾಗಿ ಜೈಲಿನಲ್ಲೇ ವಿಚಾರಣೆ ನಡೆಸಿದ್ದಾರೆ.
ಅಪರಾಧಗಳ ಕುರಿತ ದಾಖಲೆಗಳನ್ನು ಅಲ್ಲಿನ ಪೊಲೀಸರಿಗೆ ಹಸ್ತಾಂತರಿಸಿದ ಬಳಿಕ ಛೋಟಾ ರಾಜನ್ನನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ಆರಂಭವಾಗಲಿದೆ ಎನ್ನಲಾಗುತ್ತಿದೆ. ಇಂಟರ್ಪೋಲ್ ಇಂಡಿಯಾಕ್ಕೆ ನೋಡಲ್ ಸಂಸ್ಥೆಯಾಗಿರುವ ಸಿಬಿಐ ಛೋಟಾ ರಾಜನ್ನನ್ನು ವಶಪಡಿಸಿಕೊಂಡ ನಂತರ, ಮುಂಬೈ ಪೋಲಿಸರಿಗೆ ಛೋಟಾ ರಾಜನ್ನನ್ನು ಒಪ್ಪಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಾವೂದ್ ಸಹಚರರಿಂದ ದಾಳಿ ಬೆದರಿಕೆ ಇರುವ ಕಾರಣ ಇಂಡೋನೇಷಿಯಾ ಸರ್ಕಾರ ಭಾರತದ ವಿಶೇಷ ತಂಡಕ್ಕೆ ಕಮಾಂಡೊ ಭದ್ರತೆ ನೀಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.