ಮುಂಬಯಿ: ಪಟಾಕಿಗಳಲ್ಲಿ ಪಾದರಸ, ಸೀಸ ಮತ್ತು ಸಲ್ಫರ್ ಹಾಗೂ ಅಪಾಯಕಾರಿ ರಾಸಾಯನಿಕ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಪರೀಕ್ಷೆಯಲ್ಲಿ ಕಂಡು ಬಂದಿದೆ. ಇದನ್ನು ನಿಷೇಧಿಸುವಂತೆ ಆವಾಜ್ ಫೌಂಡೇಶನ್ ಎಂಬ ಎನ್ಜಿಒ ಈ ಪಟಾಕಿಗಳನ್ನು ಮಾರುಕಟ್ಟೆಯಿಂದ ವಾಪಾಸ್ ಪಡೆಯುವವಂತೆ ಮಹಾರಾಷ್ಟ್ರ ಸರ್ಕಾರ ಹಾಗೂ ಪರಿಸರ, ಅರಣ್ಯ ಸಚಿವಾಲಯಕ್ಕೆ ಪತ್ರ ಬರೆದಿದೆ.
ಅಗ್ರ 10 ರಾಸಾಯನಿಕಗಳಲ್ಲಿ ಪಾದರಸ ಹಾಗೂ ಸೀಸ ಅತ್ಯಂತ ಅಪಾಯಕಾರಿ ರಾಸಾಯನಿಕಗಳು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ಇದು ಮಕ್ಕಳ ಆರೋಗ್ಯಕ್ಕೆ ಅಪಾಯಕಾರಿ. ಕಳೆದ ವಾರ ಕೆಲವು ಪಟಾಕಿಗಳನ್ನು ಪರೀಕ್ಷಿಸಲು ಕಳುಹಿಸಿದ್ದು, ಅದರಲ್ಲಿ ವಿಷಕಾರಿ ಅಂಶಗಳು ಅತಿ ಹೆಚ್ಚು ಇರುವುದು ಕಂಡು ಬಂದಿದೆ ಎಂದು ಆವಾಜ್ ಫೌಂಡೇಶನ್ನ ಸಂಚಾಲಕಿ ಸುಮೈರಾ ಅಬ್ದುಲಾಲಿ ಹೇಳಿದ್ದಾರೆ. ಈ ವಿಷಕಾರಿ ಪಟಾಕಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಲ್ಲಿ ಕೋರಲಾಗಿದೆ ಎಂದು ಸುಮೈರಾ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.