ನ್ಯೂಯಾರ್ಕ್: ಸದಸ್ಯ ರಾಷ್ಟ್ರಗಳು ಹೊಸ ಪೀಳಿಗೆಯ ’5G’ ಮೊಬೈಲ್ ನೆಟ್ವರ್ಕ್ ಅಭಿವೃದ್ಧಿಪಡಿಸಲು ನಕ್ಷೆಯನ್ನು ಅನುಮೋದಿಸಿದ್ದು, ಇದು ಮಿಂಚಿನ ವೇಗದಲ್ಲಿ ಡೌನ್ಲೋಡ್ ಹಾಗೂ ಚಾಲಕರಹಿತ ಕಾರುಗಳಿಕೆ ಸಹಾಯಕವಾಗಲಿದೆ ಎಂದು ಯು.ಎನ್ ಹೇಳಿದೆ.
193 ಸದಸ್ಯ ರಾಷ್ಟ್ರಗಳ ತಜ್ಞರು ಮುಂದಿನ ಪೀಳಿಗೆಯ ನೆಟ್ವರ್ಕ್ ಅಭಿವೃದ್ಧಿಗೆ ಅನುಮೋದನೆ ನೀಡಿದ್ದಾರೆ ಎಂದು ಅಂತಾರಾಷ್ಟ್ರೀಯ ದೂರಸಂಪರ್ಕ ಕೇಂದ್ರ (ಐ.ಟಿ.ಯು) ತಿಳಿಸಿದೆ. ಮುಂಬರುವ 2020ರ ಒಳಗೆ ಈ ಯೋಜನೆ ಜಾರಿಗೆ ತರುವ ಸಾಧ್ಯತೆ ಇದೆ ಎಂದು ಐ.ಟಿ.ಯು ವಕ್ತಾರ ಸಂಜಯ್ ಆಚಾರ್ಯ ಹೇಳಿದ್ದಾರೆ.
ಸದ್ಯ 4ಜಿ ಪ್ರಮಾಣಿತ ವೇಗದ ಸಂಪರ್ಕ್ ಸ್ಮಾರ್ಟ್ಫೋನ್ ಬ್ರಾಡ್ಬ್ಯಾಂಡ್ಗೆ ಅನುವು ಹೊಂದಿದ್ದು, ಸರ್ಕಾರಗಳು ಹಾಗೂ ತಯಾರಕರು ಮುಂದಿನ 5 ವರ್ಷಗಳಲ್ಲಿ 5ಜಿ ಸಂಪರ್ಕ ಹೊಂದುವ ಯಂತ್ರಗಳನ್ನೂ ಹೊರತರರುವ ಯೋಜನೆ ಹೋಂದಿದ್ದಾರೆ. 5ಜಿ ಡಾಟಾ ತಂತ್ರಜ್ಞಾನವು 4ಜಿ ಡಾಟಾಗಿಂತಲೂ 1000 ಪಟ್ಟು ಹೆಚ್ಚಿನ ವೇಗವನ್ನು ನೀಡುವ ನಿರೀಕ್ಷೆ ಇದೆ.
ರೇಡಿಯೋ ಟ್ರಾನ್ಸ್ಮಿಷನ್ ತಂತ್ರಜ್ಞಾನ ಮತ್ತು ತಂತ್ರಾಂಶಗಳು ಎಷ್ಟರ ಮಟ್ಟಿಗೆ ರೇಡಿಯೋ ಸ್ಪೆಕ್ಟ್ರಮ್ ಬಳಸಬಹುದು ಎಂದು ಐಟಿಯು ನಿರ್ಧರಿಸುತ್ತದೆ. 5ಜಿ ತಂತ್ರಾನದ ಸಂಶೋಧನೆ ಮತ್ತು ಹೂಡಿಕೆಗೆ ಮೊಬೈಲ್ ಕಂಪೆನಿಗಳು ಸುಮಾರು 4 ಟ್ರಿಲಿಯನ್ ಡಾಲರ್ಗಳಷ್ಟು ವ್ಯಯಿಸಬೇಕಾಗುತ್ತದೆ ಎಂದು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ನ ತಂತ್ರಜ್ಞರು ಅಂದಾಜಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.