ಇಸ್ಲಾಮಾಬಾದ್: ಓಆರ್ಎಫ್ ಮುಖ್ಯಸ್ಥ ಸುಧೀಂದ್ರ ಕುಲಕರ್ಣಿಯವರ ಮುಖಕ್ಕೆ ಮಸಿ ಬಳಿದ ಶಿವಸೇನೆಯ ಭಯೋತ್ಪಾದನಾ ಚಟುವಟಿಕೆಗಳ ಬಗ್ಗೆ ಗಮನಹರಿಸಬೇಕಿದೆ ಎಂದು ಪಾಕಿಸ್ಥಾನ ವಿಶ್ವ ಸಮುದಾಯಕ್ಕೆ ಮನವಿ ಮಾಡಿಕೊಂಡಿದೆ.
‘ಶಿವಸೇನಾ ಸಂಘಟನೆಯ ಭಯೋತ್ಪಾದನಾ ಚಟುವಟಿಕೆಗಳ ಬಗ್ಗೆ ವಿಶ್ವ ಸಮುದಾಯ ಗಮನ ಹರಿಸಬೇಕು, ಅದರ ಚಟುವಟಿಕೆಗಳ ಬಗ್ಗೆ ನಾವು ನಿರಂತರ ಕಾಳಜಿ ವ್ಯಕ್ತಪಡಿಸುತ್ತಿದ್ದೇವೆ’ ಎಂದು ಪಾಕಿಸ್ಥಾನದ ವಿದೇಶಾಂಗ ವಕ್ತಾರ ಖಾಝಿ ಖಲಿಲುಲ್ಲಾಹ ಹೇಳಿದ್ದಾರೆ.
ಶಿವಸೇನೆಯನ್ನು ವಿಶ್ವಸಮುದಾಯ ಜಾಗತಿಕ ಭಯೋತ್ಪಾದನಾ ಸಂಘಟನೆಯೆಂದು ಘೋಷಿಸಬೇಕೆಂಬುದು ಪಾಕಿಸ್ಥಾನದ ಆಗ್ರಹ ಎನ್ನಲಾಗಿದೆ.
ಪಾಕ್ ಕಲಾವಿದರು ಭಾರತದಲ್ಲಿ ಕಾರ್ಯಕ್ರಮ ನೀಡುವುದಕ್ಕೆ, ಅಲ್ಲಿನ ಕ್ರಿಕೆಟಿಗರು ಇಲ್ಲಿ ಆಡುವುದಕ್ಕೆ ಶಿವಸೇನೆ ನಿರಂತರ ಅಡ್ಡಿಯನ್ನು ಉಂಟು ಮಾಡುತ್ತಿದೆ. ಅದಕ್ಕಾಗಿ ಪಾಕಿಸ್ಥಾನ ಅದನ್ನು ಭಯೋತ್ಪಾದನಾ ಸಂಘಟನೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.