ಜಿನೆವಾ: ಆಫ್ರಿಕಾದ ರಣಹದ್ದುಗಳು ವಿಷ ಮತ್ತು ಬೇಟೆಗಾರ ದಾಳಿಗೆ ಬಲಿಯಾಗುತ್ತಿದ್ದು, 11 ವಿವಿಧ ಪ್ರಭೇದದ ರಣಹದ್ದುಗಳು ಅಪಾಯಕ್ಕೆ ಸಿಲುಕಿವೆ ಎಂದು ಉನ್ನತ ಸಂರಕ್ಷಣಾ ತಂಡ ಎಚ್ಚರಿಸಿದೆ. ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಕೇಂದ್ರ (ಐಯುಸಿಎನ್) ನೀಡಿದ ವರದಿಯಂತೆ ಆಫ್ರಿಕಾದ ಸ್ಕ್ಯಾವೆಂಜರ್ ಹಕ್ಕಿಗಳ ಆರು ಪ್ರಭೇದಗಳು ಅಳಿವಿನ ಅಂಚಿನಲ್ಲಿದೆ ಎಂದು ತಿಳಿದು ಬಂದಿದೆ.
ಸತ್ತ ಪ್ರಾಣಿಗಳನ್ನೇ ಆಹಾರವನ್ನಾಗಿ ಬಳಸುವ ಈ ರಣಹದ್ದುಗಳು, ವಿಷಪೂರಿತ ಆಹಾರ ಇಲ್ಲವೇ ಬೇಟೆಗಾರರಿಗೆ ಬಲಿಯಾಗುತ್ತಿವೆ. ಇದನ್ನು ಸಾಂಪ್ರದಾಯಿಕವಾಗಿ ಔಷಧ ತಯಾರಿಸಲು ಬಳಸಲಾಗುತ್ತಿದೆ ಎಂದು ಸಂರಕ್ಷಣಾ ತಂಡ ಹೇಳಿದೆ.
ಬರ್ಡ್ ಲೈಫ್ ವರದಿ ಪ್ರಕಾರ ’ಹುಕ್ಡ್ ವಲ್ಚರ್’ ಹಾಗೂ ’ವೈಟ್ ಬ್ಯಾಕ್ಡ್ ವಲ್ಚರ್’ ಪ್ರಭೇದಗಳು ಅಪಾಯದ ಅಂಚಿನಲ್ಲಿದ್ದರೆ, ಇನ್ನೆರಡು ಪ್ರಭೇದದ ರಣಹದ್ದುಗಳು ಅಳಿವಿನ ಅಂಚಿನಲ್ಲಿವೆ. ವಿಶ್ವಾದ್ಯಂತ 24 ಪ್ರಭೇದಗಳ ರಣಹದ್ದುಗಳಿದ್ದು, ಇವುಗಳನ್ನು ದುರ್ಬಲ, ಅಪಾಯದಂಚಿನಲ್ಲಿರುವ ಅಥವಾ ಅಳಿವಿನಂಚಿನಲ್ಲಿರುವ ಹದ್ದುಗಳು ಎಂದು ವರ್ಗೀಕರಿಸಲಾಗಿದೆ ಎಂದು ಐಯುಸಿಎನ್ ಹೇಳಿದೆ.
ಆಫ್ರಿಕಾ ಖಂಡದಲ್ಲಿ ಗ್ರಿಫಿನ್ ಹಾಗೂ ಪಾಮ್-ನಟ್ ಜಾತಿಯ ರಣಹದ್ದುಗಳು ಅತ್ಯಲ್ಪ ಕಾಳಜಿ ವಹಿಸಲ್ಪಡುವ ರಣಹದ್ದುಗಳಾಗಿವೆ ಎಂದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.