ನವದೆಹಲಿ: ಅಫ್ಘಾನಿಸ್ಥಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಗುರುವಾರ ನವದೆಹಲಿಗೆ ಬಂದಿಳಿದಿದ್ದು, ಭಾರತಕ್ಕೆ ಆಗಮಿಸಿದ ತಾಲಿಬಾನ್ ಆಡಳಿತದ ಮೊದಲ ಸಚಿವರಾಗಿದ್ದಾರೆ. ಅಲ್ಲದೇ ಜನವರಿ 25, 2001 ರಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತಾಲಿಬಾನ್ ನಿರ್ಬಂಧ ಸಮಿತಿಯಿಂದ ಪ್ರಯಾಣ ನಿಷೇಧಕ್ಕೆ ಒಳಗಾದ ಮುತ್ತಕಿ ಅವರ ಮೊದಲ ಅಧಿಕೃತ ಭೇಟಿಯೂ ಇದಾಗಿದೆ. 2021 ರಲ್ಲಿ ತಾಲಿಬಾನ್ ಗುಂಪು ಅಧಿಕಾರ ವಹಿಸಿಕೊಂಡ ನಂತರ ತಾಲಿಬಾನ್ ನಾಯಕರೊಬ್ಬರ ಮೊದಲ ಭಾರತ ಭೇಟಿ ಇದಾಗಿದೆ.
ಸೆಪ್ಟೆಂಬರ್ 30 ರಂದು ವಿಶ್ವಸಂಸ್ಥೆಯು ಒಂದು ವಾರ ನಿಷೇಧವನ್ನು ಸಡಿಲಿಸುವುದರೊಂದಿಗೆ ಅಕ್ಟೋಬರ್ 9 ರಿಂದ 16 ರವರೆಗೆ ನವದೆಹಲಿಗೆ ಭೇಟಿ ನೀಡಲು ಅವರಿಗೆ ಅವಕಾಶ ಮಾಡಿಕೊಟ್ಟಿತು.
ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜಸಿವಾಲ್ ಅವರು ಮುತ್ತಕಿ ಅವರನ್ನು ಸ್ವಾಗತಿಸಿದ್ದು, “ದ್ವಿಪಕ್ಷೀಯ ಸಂಬಂಧಗಳು ಮತ್ತು ಪ್ರಾದೇಶಿಕ ವಿಷಯಗಳ ಕುರಿತು ಅವರೊಂದಿಗೆ ಚರ್ಚೆಯಲ್ಲಿ ತೊಡಗಿಸಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ” ಎಂದಿದ್ದಾರೆ.
ಭೇಟಿಯ ಕಾರ್ಯಸೂಚಿಯ ಬಗ್ಗೆ ಸಾರ್ವಜನಿಕವಾಗಿ ಏನನ್ನೂ ಬಹಿರಂಗಪಡಿಸಲಾಗಿಲ್ಲವಾದರೂ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಎನ್ಎಸ್ಎ ಅಜಿತ್ ದೋವಲ್ ಅವರೊಂದಿಗೆ ಮುತ್ತಕಿ ಮಾತುಕತೆ ನಡೆಸುತ್ತಾರೆ ಎಂದು ಮೂಲಗಳು ಖಚಿತಪಡಿಸಿವೆ. ಮುತ್ತಕಿ ದಾರುಲ್ ಉಲೂಮ್ ದಿಯೋಬಂದ್ ಸೆಮಿನರಿ ಮತ್ತು ತಾಜ್ ಮಹಲ್ಗೆ ಭೇಟಿ ನೀಡಲಿದ್ದಾರೆ, ಜೊತೆಗೆ ವ್ಯಾಪಾರ ಗುಂಪುಗಳು ಮತ್ತು ಅಫಘಾನ್ ಸಮುದಾಯದ ಸದಸ್ಯರನ್ನು ಭೇಟಿ ಮಾಡಲಿದ್ದಾರೆ.
Warm welcome to Afghan Foreign Minister, Mawlawi Amir Khan Muttaqi on his arrival in New Delhi.
We look forward to engaging discussions with him on bilateral relations and regional issues. pic.twitter.com/Z4eo6dTctJ
— Randhir Jaiswal (@MEAIndia) October 9, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.