ಲಕ್ನೋ: ಗೃಹಸಚಿವ ರಾಜನಾಥ್ ಸಿಂಗ್ ಅವರ ಸಂಬಂಧಿಯೋರ್ವರನ್ನು ವಾರಣಾಸಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ
ಪೆಟ್ರೋಲ್ ಬಂಕ್ ಮಾಲೀಕರಾದ ಅರವಿಂದ್ ಸಿಂಗ್ ಎಂಬುವವರು ತಮ್ಮ ಪತ್ನಿಯನ್ನು ಮಂಗಳವಾರ ರಾತ್ರಿ ವಿಮಾನನಿಲ್ದಾಣಕ್ಕೆ ಡ್ರಾಪ್ ಮಾಡಿ ವಾಪಾಸ್ ಬರುತ್ತಿದ್ದಾಗ ಬೈಕ್ನಲ್ಲಿ ಬಂದ ಮೂವರು ಆಗಂತುಕರು ಅವರನ್ನು ಅಡ್ಡಗಟ್ಟಿ ಮಕ್ಷುಧನ್ಪಟ್ಟಿಯ ಫುಲ್ಪೂರ್ ಬಳಿ ಅಡ್ಡಗಟ್ಟಿ ಗುಂಡಿಕ್ಕಿ ಕೊಲೆ ಮಾಡಿದ್ದಾರೆ.
ಬುಲೆಟ್ ಕುತ್ತಿಗೆಗೆ ತಗುಲಿ ತಲೆಯಿಂದ ಹೊರ ಬಂದಿದೆ. ಒಬ್ಬ ಆಗಂತುಕ ಸಿಂಗ್ ಅವರ ಕಾರಿನಲ್ಲಿ ಕೆಲ ನಿಮಿಷಗಳ ಕಾಲ ಕೂತು ಮಾತನಾಡಿ ಬಳಿಕ ಅವರ ಕುತ್ತಿಗೆಗೆ ಗುಂಡಿಟ್ಟು ಕೊಂದ ಎಂದು ಘಟನೆಯನ್ನು ಕಣ್ಣಾರೆ ಕಂಡ ಮಹಿಳೆಯೊಬ್ಬರು ವಿವರಿಸಿದ್ದಾರೆ.
ಪೊಲೀಸರು ರಾಜನಾಥ್ ಸಿಂಗ್ ಅವರಿಗೆ ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.